September 29, 2026
Tuesday, September 29, 2026
spot_img

ಉದ್ಘಾಟನೆಯ ಕೆಲವೇ ವಾರಗಳಲ್ಲಿ ಕುಸಿದ ಸುರಂಗ: ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಾಫಿಕ್ ಜಾಮ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆ ಮುಂಬೈ–ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿನ ಹೊಸ ‘ಮಿಸ್ಸಿಂಗ್ ಲಿಂಕ್’ ಸುರಂಗದ ಒಂದು ಭಾಗ ಹಾನಿಗೊಳಗಾಗಿದ್ದು, ಹೆದ್ದಾರಿಯಲ್ಲಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಸುರಂಗದ ಬಳಿಯಲ್ಲಿ ಭೂಕುಸಿತವೂ ಸಂಭವಿಸಿದ್ದರಿಂದ ಎರಡೂ ದಿಕ್ಕಿನ ವಾಹನಗಳು ಗಂಟೆಗಳ ಕಾಲ ಸಾಲುಗಟ್ಟಿ ನಿಂತವು.

ಪ್ರಯಾಣಿಕರಿಗೆ ಪರದಾಟ, ತುರ್ತು ಕಾರ್ಯಾಚರಣೆ

ಘಟನೆಯ ನಂತರ ಅಗ್ನಿಶಾಮಕ ದಳ ಮತ್ತು ಸಂಬಂಧಿತ ಇಲಾಖೆಗಳು ಸ್ಥಳಕ್ಕೆ ಧಾವಿಸಿ ಮಣ್ಣು ಹಾಗೂ ಬಂಡೆಗಳನ್ನು ತೆರವುಗೊಳಿಸುವ ಕಾರ್ಯ ನಡೆಸಿದವು. ಭಾರೀ ಮಳೆಯ ಕಾರಣ ನೀರು ರಸ್ತೆಗೆ ಹರಿದಿದ್ದರಿಂದ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಸಾವಿರಾರು ಪ್ರಯಾಣಿಕರು ದೀರ್ಘಕಾಲ ರಸ್ತೆಯಲ್ಲೇ ಸಿಲುಕಿಕೊಂಡು ಪರದಾಡಿದರು.

ಇದನ್ನೂ ಓದಿ:

ಕಾಮಗಾರಿ ಗುಣಮಟ್ಟದ ಬಗ್ಗೆ ರಾಜಕೀಯ ಆರೋಪ

ಈ ಘಟನೆ ಬಳಿಕ ಸುರಂಗ ನಿರ್ಮಾಣದ ಗುಣಮಟ್ಟದ ಕುರಿತು ರಾಜಕೀಯ ವಾಗ್ವಾದ ಶುರುವಾಗಿದೆ. ವಿರೋಧ ಪಕ್ಷಗಳು ಯೋಜನೆಯಲ್ಲಿ ಗುಣಮಟ್ಟದ ಕೊರತೆ ಹಾಗೂ ಅಕ್ರಮಗಳ ಆರೋಪ ಮಾಡಿದ್ದು, ಸರ್ಕಾರವು ಮಾತ್ರ ಅತಿವೃಷ್ಟಿಯೇ ಈ ಹಾನಿಗೆ ಪ್ರಮುಖ ಕಾರಣ ಎಂದು ಸ್ಪಷ್ಟಪಡಿಸಿದೆ. ಸುರಂಗದ ಸುರಕ್ಷತೆ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Must Read