October 9, 2026
Friday, October 9, 2026
spot_img

ಶೇಖ್‌ ಹಸೀನಾ ವಿರೋಧಿ ಕಾರ್ಯಕ್ರಮದಲ್ಲಿ ನಿಗೂಢ ಸ್ಫೋಟ: ಮೂವರು ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಷ್ಟ್ರೀಯ ನಾಗರಿಕ ಪಕ್ಷ ಆಯೋಜಿಸಿದ್ದ ಬೃಹತ್‌ ರ‍್ಯಾಲಿ ವೇಳೆ ಪ್ರಬಲ ಸ್ಫೋಟ ಸಂಭವಿಸಿದೆ. ಇದರಿಂದ ಮೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ಢಾಕಾದ ಸಾವರ್‌ನಲ್ಲಿ ನಡೆದಿದೆ.

ಎನ್‌ಸಿಪಿ ನಾಯಕರೊಬ್ಬರು ರ‍್ಯಾಲಿ ಯನ್ನುದ್ದೇಶಿಸಿ ವೇದಿಯಲ್ಲಿ ಮಾತನಾಡುತ್ತಿದ್ದಾಗಲೇ ಘಟನೆ ನಡೆದಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ. ಸ್ಫೋಟಕ ಸಂಭವಿಸುತ್ತಿದ್ದಂತೆ ನೆರೆದಿದ್ದ ಜನರೆಲ್ಲಾ ಧಿಕ್ಕಾಪಾಲಾಗಿ ಓಡಿದ್ದಾರೆ. ಸದ್ಯ ಸ್ಫೋಟದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ವಿರುದ್ಧ ನಡೆದ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಯ 2ನೇ ವಾರ್ಷಿಕೋತ್ಸವದ ಹಿನ್ನೆಲೆ ಬೃಹತ್‌ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ಏಕೆಂದರೆ ಬಾಂಗ್ಲಾದೇಶದ ರಾಜಕೀಯ ಪಥ ಬದಲಾಯಿಸಿದ ಚಳವಳಿ ಅದಾಗಿತ್ತು. ವಿದ್ಯಾರ್ಥಿಗಳ ಹೋರಾಟದ ಹಾದಿಯನ್ನು ನೆನಪಿಸುವ ಸಲುವಾಗಿ ಎನ್‌ಸಿಪಿ ರ‍್ಯಾಲಿಯನ್ನ ಹಮ್ಮಿಕೊಂಡಿತ್ತು. ಇದೇ ಕಾರ್ಯಕ್ರಮದಲ್ಲಿ ಉಂಟಾದ ಪ್ರಬಲ ಸ್ಫೋಟ ಮತ್ತೆ ಸ್ಥಳದಲ್ಲಿ ಉದ್ವಿಗ್ನತೆ ಹೆಚ್ಚುವಂತೆ ಮಾಡಿದೆ.

Must Read