ಮೈದಾ ಇಲ್ಲದೆ, ಹಿಟ್ಟಿನ ಕೆಲಸ ಇಲ್ಲದೆ ಕೂಡ ಮನೆಯಲ್ಲೇ ಸಾಫ್ಟ್ ಹಾಗೂ ಟೇಸ್ಟಿ ಮೊಮೊಸ್ ಮಾಡಬಹುದು ಗೊತ್ತಾ? ರೈಸ್ ಪೇಪರ್ ಇದ್ದರೆ ಸಾಕು! ಲೈಟ್ ಆಗಿ, ಡಯಟ್‌ಗೆ ಕೂಡ ಸೂಕ್ತವಾದ ಈ ರೆಸಿಪಿ ಸಂಜೆ ಸ್ನ್ಯಾಕ್‌ಗೆ ಸೂಪರ್ ಆಯ್ಕೆ.
ಬೇಕಾಗುವ ಸಾಮಗ್ರಿಗಳು
ರೈಸ್ ಪೇಪರ್ ಶೀಟ್‌ಗಳು – 8 ರಿಂದ 10
ಕ್ಯಾಬೇಜ್ – 1 ಕಪ್ (ಚೂರು)
ಕ್ಯಾರೆಟ್ – ½ ಕಪ್
ಕ್ಯಾಪ್ಸಿಕಂ – ½ ಕಪ್
ಈರುಳ್ಳಿ – 1
ಮೆಣಸು ಪುಡಿ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸೋಯಾ ಸಾಸ್ – 1 ಟೀ ಸ್ಪೂನ್
ಎಣ್ಣೆ – 1 ಟೇಬಲ್ ಸ್ಪೂನ್
ಮಾಡುವ ವಿಧಾನ
ಮೊದಲು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ ಹಾಕಿ ಸ್ವಲ್ಪ ಹುರಿಯಿರಿ. ನಂತರ ಕ್ಯಾಬೇಜ್, ಕ್ಯಾರೆಟ್, ಕ್ಯಾಪ್ಸಿಕಂ ಸೇರಿಸಿ ಹೆಚ್ಚಿನ ಉರಿಯಲ್ಲಿ 2–3 ನಿಮಿಷ ಸ್ಟರ್ ಫ್ರೈ ಮಾಡಿ. ಉಪ್ಪು, ಮೆಣಸು ಪುಡಿ ಮತ್ತು ಸಾಯ್ ಸಾಸ್ ಹಾಕಿ ಮಿಶ್ರಣ ಮಾಡಿ ಸ್ಟಫಿಂಗ್ ತಯಾರಿಸಿ ತಣ್ಣಗಾಗಲು ಬಿಡಿ.
ರೈಸ್ ಪೇಪರ್ ಶೀಟ್ ಅನ್ನು 10 ಸೆಕೆಂಡ್ ಬೆಚ್ಚಗಿನ ನೀರಲ್ಲಿ ತೊಳೆದು ಮೃದುವಾಗಿಸಿ. ಮಧ್ಯದಲ್ಲಿ ಸ್ಟಫಿಂಗ್ ಇಟ್ಟು ಮೊಮೊಸ್ ಆಕಾರದಲ್ಲಿ ಮಡಚಿ.
ಈಗ ಸ್ಟೀಮರ್‌ನಲ್ಲಿ 5–7 ನಿಮಿಷ ಆವಿಯಲ್ಲಿ ಬೇಯಿಸಿದರೆ ಸಾಕು. ಬಿಸಿ ಬಿಸಿ ರೈಸ್ ಪೇಪರ್ ಮೊಮೊಸ್ ಚಟ್ನಿ ಜೊತೆ ಸವಿದ್ರೆ ರುಚಿ ಗ್ಯಾರಂಟಿ!



