February 24, 2026
Tuesday, February 24, 2026
spot_img

Kitchen Tips | ಹರಿದು ಹಾಳಾದ ಸ್ಪಾಂಜ್ ಪಾತ್ರೆ ತೊಳೆಯೋಕೆ ಬಳಸುತ್ತಿದ್ದೀರಾ? ಆರೋಗ್ಯಕ್ಕೆ ಡೇಂಜರ್

ಅಡುಗೆಮನೆಯ ಸ್ವಚ್ಛತೆ ಅಂದರೆ ಕೇವಲ ಪಾತ್ರೆ ತೊಳೆಯೋದು ಮಾತ್ರವಲ್ಲ. ನಾವು ಬಳಸುವ ಸಣ್ಣಸಣ್ಣ ವಸ್ತುಗಳ ಸ್ವಚ್ಛತೆಯೂ ಅದಕ್ಕಿಂತ ಮುಖ್ಯ. ಅವುಗಳಲ್ಲಿ ಪ್ರಮುಖವಾದದ್ದು ಪಾತ್ರೆ ತೊಳೆಯುವ ಸ್ಪಾಂಜ್. ಬಹುತೇಕ ಮನೆಗಳಲ್ಲಿ ಸ್ಪಾಂಜ್ ಹರಿದು, ಬಣ್ಣ ಬದಲಾಗಿ, ದುರ್ವಾಸನೆ ಬರುತ್ತಿದ್ದರೂ ಕೂಡ ಅದನ್ನೇ ಮತ್ತೆ ಮತ್ತೆ ಬಳಸುವ ಅಭ್ಯಾಸ ಇದೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ.

ಸ್ಪಾಂಜ್ ಸದಾ ತೇವವಾಗಿರುತ್ತದೆ. ತೇವ ಮತ್ತು ಆಹಾರದ ಅವಶೇಷಗಳು ಸೇರಿಕೊಂಡಾಗ ಬ್ಯಾಕ್ಟೀರಿಯಾಗಳು ವೇಗವಾಗಿ ಹೆಚ್ಚಾಗುತ್ತವೆ. ಹೊರಗೆ ನೋಡಲು ಸ್ವಚ್ಛವಾಗಿ ಕಾಣಿಸಿದರೂ, ಅದರ ಒಳಭಾಗದಲ್ಲಿ ಲಕ್ಷಾಂತರ ಜೀವಾಣುಗಳು ಇರಬಹುದು. ಇದೇ ಸ್ಪಾಂಜ್‌ನಿಂದ ತೊಳೆಯುವ ಪಾತ್ರೆಗಳು ಸಂಪೂರ್ಣ ಸ್ವಚ್ಛವಾಗುತ್ತವೆಯೇ ಎಂಬುದು ಪ್ರಶ್ನೆ. ವಿಶೇಷವಾಗಿ ಹಾಲು, ಮಾಂಸ ಅಥವಾ ಎಣ್ಣೆ ಪದಾರ್ಥಗಳ ಪಾತ್ರೆಗಳನ್ನು ತೊಳೆಯುವಾಗ ಸೋಂಕಿನ ಸಾಧ್ಯತೆ ಹೆಚ್ಚುತ್ತದೆ.

ಇದನ್ನೂ ಓದಿ:

ತಜ್ಞರ ಪ್ರಕಾರ, ಒಂದು ಸ್ಪಾಂಜ್‌ನ್ನು ಹೆಚ್ಚು ದಿನ ಬಳಸಬಾರದು. ವಾರಕ್ಕೊಮ್ಮೆ ಬದಲಾಯಿಸುವುದು ಉತ್ತಮ. ಕನಿಷ್ಠ ಮೂರು-ನಾಲ್ಕು ದಿನಕ್ಕೊಮ್ಮೆ ಅದನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಬಳಸಿದ ಬಳಿಕ ಒಣಗುವಂತೆ ತೆರೆದ ಜಾಗದಲ್ಲಿ ಇಡುವುದು ಅಗತ್ಯ.

ಅಡುಗೆಮನೆಯಲ್ಲಿ ಸ್ವಚ್ಛತೆ ಕಾಪಾಡುವುದು ಕುಟುಂಬದ ಆರೋಗ್ಯ ಕಾಪಾಡಿದಂತೇ. ಆದ್ದರಿಂದ ಹರಿದು ಹಾಳಾದ ಸ್ಪಾಂಜ್ ಅನ್ನು ಇನ್ನು ಮುಂದೂ ಮುಂದೂ ಬಳಸದೆ, ಸಮಯಕ್ಕೆ ಸರಿಯಾಗಿ ಬದಲಾಯಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಸಣ್ಣ ನಿರ್ಲಕ್ಷ್ಯವೇ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !