February 24, 2026
Tuesday, February 24, 2026
spot_img

HEALTH | ಸ್ಟ್ರೋಕ್ ಆಗೋ ಮುಂಚೆ ಈ ಎಲ್ಲಾ ಲಕ್ಷಣಗಳು ಕಾಣಿಸುತ್ತಂತೆ! ನೀವೂ ಜಾಗ್ರತೆಯಾಗಿರಿ

ಸ್ಟ್ರೋಕ್ ಎನ್ನುವುದು ಅಚಾನಕ್ ಸಂಭವಿಸುವ ಗಂಭೀರ ಆರೋಗ್ಯ ಸಮಸ್ಯೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ದೇಹ ಮುಂಚಿತವಾಗಿಯೇ ಕೆಲವು ಎಚ್ಚರಿಕೆ ಸೂಚನೆಗಳನ್ನು ನೀಡುತ್ತದೆ. ಅವನ್ನು ಸಮಯಕ್ಕೆ ಗುರುತಿಸಿದರೆ ಅಪಾಯವನ್ನು ತಪ್ಪಿಸಬಹುದು. ಆದ್ದರಿಂದ ಈ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ.

ಹಠಾತ್ ಮುಖದ ಒಂದು ಭಾಗ ಸುಸ್ತಾಗುವುದು ಅಥವಾ ಬಾಯಿಯ ಒಂದು ಮೂಲೆ ಕುಸಿಯುವುದು ಸಾಮಾನ್ಯ ಲಕ್ಷಣ. ಕೈ ಅಥವಾ ಕಾಲಿನಲ್ಲಿ ಏಕಾಏಕಿ ದುರ್ಬಲತೆ ಕಾಣಿಸಬಹುದು. ಕೆಲವರಿಗೆ ಮಾತು ಸ್ಪಷ್ಟವಾಗಿ ಬರದೆ ತಡಬಡಿಕೆ ಉಂಟಾಗುತ್ತದೆ. ಮಾತನಾಡಲು ಪ್ರಯತ್ನಿಸಿದರೂ ಪದಗಳು ಸರಿಯಾಗಿ ಉಚ್ಛರಿಸದಿರುವುದು ಎಚ್ಚರಿಕೆಯ ಸೂಚನೆ.

ಇದನ್ನೂ ಓದಿ:

ಇದರ ಜೊತೆಗೆ ತಲೆ ಸುತ್ತುವುದು, ಸಮತೋಲನ ಕಳೆದುಕೊಳ್ಳುವುದು, ಹಠಾತ್ ತೀವ್ರ ತಲೆನೋವು ಕಾಣಿಸಿಕೊಳ್ಳುವುದು ಕೂಡ ಸ್ಟ್ರೋಕ್ ಮುನ್ನ ಕಾಣಿಸಬಹುದಾದ ಲಕ್ಷಣಗಳು. ಕೆಲವು ಸಂದರ್ಭಗಳಲ್ಲಿ ಒಂದು ಕಣ್ಣಿನಲ್ಲಿ ಅಥವಾ ಎರಡೂ ಕಣ್ಣುಗಳಲ್ಲಿ ದೃಷ್ಟಿ ಮಂಕಾಗಬಹುದು. ಈ ಲಕ್ಷಣಗಳು ಕೆಲವೇ ನಿಮಿಷಗಳಲ್ಲಿ ಕಡಿಮೆಯಾಗಿದ್ರೂ ಅವನ್ನು ನಿರ್ಲಕ್ಷ್ಯ ಮಾಡಬಾರದು.

ರಕ್ತದೊತ್ತಡ, ಮಧುಮೇಹ, ಅತಿಯಾದ ಒತ್ತಡ ಹಾಗೂ ಅಸ್ವಸ್ಥ ಜೀವನಶೈಲಿ ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತವೆ. ನಿಯಮಿತ ಆರೋಗ್ಯ ತಪಾಸಣೆ, ಸಮತೋಲನ ಆಹಾರ, ವ್ಯಾಯಾಮ ಹಾಗೂ ಧೂಮಪಾನದಿಂದ ದೂರ ಇರುವುದು ಮುನ್ನೆಚ್ಚರಿಕೆಯ ಕ್ರಮಗಳು.

ಲಕ್ಷಣಗಳು ಕಂಡ ಕೂಡಲೇ ವೈದ್ಯಕೀಯ ನೆರವು ಪಡೆಯುವುದು ಅತ್ಯಂತ ಮುಖ್ಯ. ಸಮಯಕ್ಕೆ ಚಿಕಿತ್ಸೆ ಸಿಕ್ಕರೆ ಜೀವ ಉಳಿಯುವ ಸಾಧ್ಯತೆ ಹೆಚ್ಚುತ್ತದೆ. ಜಾಗೃತಿಯೇ ಸ್ಟ್ರೋಕ್ ವಿರುದ್ಧದ ದೊಡ್ಡ ಆಯುಧ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !