February 24, 2026
Tuesday, February 24, 2026
spot_img

ಡೈರಿಯಲ್ಲೇ ಹಾಲು ಕಲಬೆರಿಕೆಯಾಯ್ತು, ಕುಡಿದವರಿಗೆಲ್ಲಾ ಕಿಡ್ನಿ ಡಮಾರ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಆಂಧ್ರಪ್ರದೇಶದ ಅನಿಧಿಕೃತ ಡೈರಿಯಲ್ಲಿ ಅನಿಲ ಸೋರಿಕೆಯಿಂದಾಗಿ ಹಾಲು ಕಲುಷಿತವಾಗಿದೆ. ಇದನ್ನು ಸೇವಿಸಿದ ಎಷ್ಟೋ ಮಂದಿಗೆ ಅನಾರೋಗ್ಯ ಸಮಸ್ಯೆಯಾಗಿದೆ, ಕೆಲವರಿಗೆ ಮೂತ್ರಪಿಂಡ ಸಮಸ್ಯೆಯಾಗಿದೆ.

ಫ್ರಿಡ್ಜ್‌ನಲ್ಲಿ ಎಥಿಲೀನ್‌ ಗ್ಲೈಕಾಲ್‌ ಸೋರಿಕೆಯಾಕಿದೆ. ಹೀಗಾಗಿ ಹಾಲು ಕಲುಷಿತಗೊಂಡಿದೆ, ಹಾಲನ್ನು ಸೇವಿಸಿದ ಗ್ರಾಹಕರು ತೀವ್ರ ಹಾನಿ ಅನುಭವಿಸಿದ್ದಾರೆ.

ಕೋರುಕೊಂಡ ಮಂಡಲದ ನರಸಪುರಂ ಗ್ರಾಮದ ಗಣೇಶೇಶ್ವರ ರಾವ್ ನಿರ್ವಹಿಸುತ್ತಿದ್ದ ವರಲಕ್ಷ್ಮಿ ಡೈರಿಯಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇದರ ಮಾಲೀಕರು, ಪ್ರತಿದಿನ ಸುಮಾರು 120 ಲೀಟರ್ ಹಾಲನ್ನು ಮೂರು ಕ್ಯಾನ್‌ಗಳಲ್ಲಿ ಸಂಗ್ರಹಿಸಿ ಮರುದಿನ ಮನೆಗಳಿಗೆ ವಿತರಿಸುತ್ತಾರೆ.

15ನೇ ತಾರೀಕಿನಂದು ಶೀತಲೀಕರಣ ಘಟಕದಲ್ಲಿ ಅನಿಲ ಸೋರಿಕೆಯು ಒಂದು ಕ್ಯಾನ್ ಹಾಲು ಕಲುಷಿತಗೊಳಿಸಿದೆ. ಇದರ ಅರಿವಿಲ್ಲದೆ, ಮಾಲೀಕರು ಆ ಹಾಲನ್ನು ಗ್ರಾಹಕರಿಗೆ ವಿತರಿಸಿದ್ದಾರೆ. ಫ್ರಿಡ್ಜ್​ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಫೆಬ್ರವರಿ 17 ರಂದು ಫ್ರಿಡ್ಜ್​ ಅನ್ನು ದುರಸ್ತಿ ಮಾಡಲಾಗಿದೆ ಎಂದು ವರದಿಯಾಗಿದೆ.

100-200 ಮಿಲಿಲೀಟರ್ ಎಥಿಲೀನ್ ಗ್ಲೈಕಾಲ್ ಸೇವನೆಯು ಮಾರಕವಾಗಬಹುದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಅರ್ಧ ಗಂಟೆಯಿಂದ 12 ಗಂಟೆಗಳ ಒಳಗಾದರೆ ವಾಂತಿ, ತಲೆ ತಿರುಗುವುದು, ವಾಕರಿಕೆ, ತಲೆನೋವು, ಸುಸ್ತಾಗುತ್ತದೆ.

12 ಮತ್ತು 24 ಗಂಟೆಗಳ ನಡುವೆಯಾದರೆ ಚಯಾಪಚಯ, ಆಸಿಡ್‌ ರಿಫ್ಲಕ್ಸ್‌, ಉಸಿರಾಟದ ಸಮಸ್ಯೆ, ಹೃದಯ ಬಡಿತದ ಸಮಸ್ಯೆ, ಲೋಬಿಪಿ ಸಮಸ್ಯೆ ಬಾಧಿಸಲಿದೆ. ಇನ್ನು 24 ರಿಂದ 72 ಗಂಟೆಗಳ ಒಳಗೆ ಮೂತ್ರಪಿಂಡದ ವೈಫಲ್ಯ, ಮೆದುಳು, ಶ್ವಾಸಕೋಶದ ಸಮಸ್ಯೆ ಹಾಗೂ ನರ್ವಸ್‌ ಸಿಸ್ಟಮ್‌ ಮೇಲೆ ಪರಿಣಾಮ ಬೀರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !