ಹೊಸದಿಗಂತ ಡಿಜಿಟಲ್ ಡೆಸ್ಕ್:
ರಶ್ಮಿಕಾ ಮತ್ತು ವಿಜಯ್ ವಿವಾಹವು ರಾಜಸ್ಥಾನದ ಉದಯಪುರದ ಖಾಸಗಿ ಹೋಟೆಲ್‌ನಲ್ಲಿ ಫೆಬ್ರವರಿ 26ರಂದು ಅದ್ದೂರಿಯಾಗಿ ನಡೆಯಲಿದೆ. ಈ ಮದುವೆಗೆ ಬರೀ ನೂರು ಜನರಿಗೆ ಮಾತ್ರ ಆಹ್ವಾನವಿದೆ.
ಸ್ಥಳೀಯ ಪೊಲೀಸರು, ಹೈದರಾಬಾದ್‌ನ ವಿಶೇಷ ತಂಡ ಹಾಗೂ ಅಂತಾರಾಷ್ಟ್ರೀಯ ಭದ್ರತೆಯ ನಡುವೆ ರಶ್ಮಿಕಾ, ವಿಜಯ್ ಮದುವೆ ಸಮಾರಂಭ ನಡೆಯಲಿದೆ. ಮದುವೆಗೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ವಿಷಯವನ್ನೂ ಕೂಡ ರಹಸ್ಯವಾಗಿಡಲು ಈ ಜೋಡಿ ನಿರ್ಧರಿಸಿದೆ. ಅರಾವಳಿ ಬೆಟ್ಟಗಳ ನಡುವೆ ಇರುವ ಖಾಸಗಿ ಹೋಟೆಲ್‌ನಲ್ಲಿ ಮದುವೆ ನಡೆಯಲಿದೆ. ಇದನ್ನು ವಿರೋಶ್ ವಿವಾಹ ಎಂದು ಕರೆಯಲಾಗುತ್ತಿದೆ.
ವಿವಾಹ ಆಚರಣೆಗಳು ಮಂಗಳವಾರದಿಂದಲೇ ಪ್ರಾರಂಭವಾಗಿವೆ. ಮೆಹಂದಿ ಸಮಾರಂಭ ಮಂಗಳವಾರ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಸಂಗೀತ್ ಸೆರೆಮನಿ ಫೆಬ್ರವರಿ 25ರಂದು ನಡೆಯಲಿವೆ. ಈ ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತರು ಭಾಗವಹಿಸಲಿದ್ದಾರೆ. ಅಲ್ಲದೇ, ಅವರ ಮದುವೆಗೆ ಬರುವ ಅತಿಥಿಗಳಿಗಾಗಿ ಜಪಾನೀಸ್ ಖಾದ್ಯಗಳನ್ನು ತಯಾರಿಸಲಾಗುತ್ತದೆ.



