April 17, 2026
Friday, April 17, 2026
spot_img

ಅಭಿವೃದ್ಧಿ ಕಾಮಗಾರಿ ಮರುಪ್ರಾರಂಭಿಸಲು ಡಿಸಿಎಂ ಭರವಸೆ ಕೊಟ್ಟಿದ್ದಾರೆ: ಮುನಿರತ್ನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರ್‌ಆರ್ ನಗರ ಕ್ಷೇತ್ರದಲ್ಲಿ ನಿಂತಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಮರುಪ್ರಾರಂಭಿಸಲು ಡಿಸಿಎಂ ಡಿಕೆ ಶಿವಕುಮಾರ್‌ ಭರವಸೆ ನೀಡಿದ್ದಾರೆ ಎಂದು ಶಾಸಕ ಮುನಿರತ್ನ ತಿಳಿಸಿದ್ದಾರೆ.

ಸರ್ಕಾರಿ ನಿವಾಸದಲ್ಲಿ ಡಿಸಿಎಂ ಅವರನ್ನು ಭೇಟಿ ಮಾಡಿದ ಬಳಿಕ ಅವರು ಈ ಮಾಹಿತಿ ನೀಡಿದರು.

ಇದನ್ನೂ ಓದಿ:

ವಿಶೇಷ ಅಧಿವೇಶನದ ವೇಳೆ ಕ್ಷೇತ್ರದ ಬಾಕಿ ಕೆಲಸಗಳ ಬಗ್ಗೆ ಸಮಯ ನೀಡುವಂತೆ ಮನವಿ ಮಾಡಿದ್ದೆ. ಅದರಂತೆ ಇಂದು ಭೇಟಿಗೆ ಅವಕಾಶ ದೊರಕಿದ್ದು, ಕಾಮಗಾರಿಗಳ ವಿವರಪಟ್ಟಿಯನ್ನು ಸಲ್ಲಿಸಿದ್ದೇನೆ ಎಂದು ಹೇಳಿದರು. ಶೀಘ್ರದಲ್ಲೇ ಸಂಬಂಧಿತ ಆಯುಕ್ತರಿಗೆ ಸೂಚನೆ ನೀಡಿ ಕೆಲಸ ಆರಂಭಿಸುವುದಾಗಿ ಡಿಸಿಎಂ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿಸಿದರು.

ಡಿಕೆ ಶಿವಕುಮಾರ್ ಅವರ ಮಾತಿನ ಮೇಲೆ ನನಗೆ ವಿಶ್ವಾಸವಿದೆ. ಕಳೆದ ಮೂರು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿದ್ದೇನೆ. ನನ್ನ ಕ್ಷೇತ್ರದ ಹಿತಕ್ಕಾಗಿ ಯಾರನ್ನಾದರೂ ಸಂಪರ್ಕಿಸಲು ಹಿಂಜರಿಯುವುದಿಲ್ಲ ಎಂದು ಮುನಿರತ್ನ ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !