June 1, 2026
Monday, June 1, 2026
spot_img

ಗಟ್ಟಿಯಾಗಿದ್ದ ಮನೆ ಬೀಗ ಮುರಿದು ಅರ್ಧ ಕೆಜಿ ಚಿನ್ನ ಕದ್ದು ಎಸ್ಕೇಪ್‌ ಆದ ಕಳ್ಳರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಮನಗರದಲ್ಲಿ ಮನೆಗೆ ಹಾಕಿದ್ದ ಗಟ್ಟಿಯಾದ ಬೀಗವನ್ನು ಮುರಿದು ಕಳ್ಳರು ಚಿನ್ನ ಕದ್ದು ಪರಾರಿಯಾಗಿದ್ದಾರೆ. ಟೌನ್‌ ವ್ಯಾಪ್ತಿಯ ದ್ಯಾವರಸೇಗೌಡನದೊಡ್ಡಿ ಬಳಿಯಲ್ಲಿ ಮನೆ ಮಾಡಿಕೊಂಡಿದ್ದ ಸಾಫ್ಟ್‌ವೇರ್‌ ಉದ್ಯೋಗಿ ಲಿಖಿತ್‌ ಮನೆಯಲ್ಲಿ ಕಳ್ಳತನ ನಡೆದಿದೆ.

ಮನೆಯಲ್ಲಿ ಯಾರೂ ಇಲ್ಲದನ್ನು ಮನಗಂಡ ಕಳ್ಳರು ಬೀಗವನ್ನು ಒಡೆದು ಬಂಗಾರವನ್ನು ಕದ್ದಿದ್ದಾರೆ. ಬೆಡ್‌ರೂಮ್‌ನ ಕಬೋರ್ಡ್‌ನಲ್ಲಿ ಚಿನ್ನ ಇಡಲಾಗಿತ್ತು. ಮನೆಗೆ ಸಿಸಿಟಿವಿ ಹಾಕಿಸಿದ್ದರೂ ಕಳ್ಳತನ ನಡೆದಿದ್ದು, ಕ್ಯಾಮರಾವನ್ನೂ ಕದ್ದು ಹೋಗಿದ್ದಾರೆ.

ಸಂಜೆ ಮನೆಗೆ ಬಂದು ನೋಡಿ ಶಾಕ್‌ ಆದ ಲಿಖಿತ್‌ ಸೀದ ಬೆಡ್‌ರೂಮ್‌ಗೆ ಹೋಗಿದ್ದಾರೆ. ಅಷ್ಟೂ ಚಿನ್ನ ಕಳುವಾಗಿರುವುದು ಗೊತ್ತಾಗಿದೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಖದೀಮರ ಹುಡುಕಾಟದಲ್ಲಿ ತೊಡಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !