ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಜಲಮಂಡಳಿಯು ಕಾವೇರಿ 5ನೇ ಹಂತದ ಯೋಜನೆಯಡಿ ಅತ್ಯಾಧುನಿಕ ಎಲೆಕ್ಟ್ರೋ ಮ್ಯಾಗ್ನೆಟಿಕ್ ಫ್ಲೋ ಮೀಟರ್‌ಗಳನ್ನು ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 26ರ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಶುಕ್ರವಾರ ಬೆಳಿಗ್ಗೆ 6 ಗಂಟೆಯವರೆಗೆ ನಗರದ ಪೂರ್ವ ಮತ್ತು ದಕ್ಷಿಣ ವಲಯದ ಹಲವು ಭಾಗಗಳಲ್ಲಿ ನೀರು ಸರಬರಾಜಿನಲ್ಲಿ ಸಂಪೂರ್ಣ ವ್ಯತ್ಯಯ ಉಂಟಾಗಲಿದೆ.
ಪಂಪಿಂಗ್ ಆರಂಭವಾದರೂ, ಮನೆಗಳಿಗೆ ನೀರು ತಲುಪಿ ಒತ್ತಡ ಸಹಜ ಸ್ಥಿತಿಗೆ ಬರಲು ಶುಕ್ರವಾರ ಮಧ್ಯಾಹ್ನದವರೆಗೆ ಸಮಯ ಹಿಡಿಯಬಹುದು.
ಎಲ್ಲೆಲ್ಲಿ ನೀರು ಇರುವುದಿಲ್ಲ?
ವೈಟ್‌ಫೀಲ್ಡ್, ಕಡುಗೋಡಿ, ಹೂಡಿ, ಗರುಡಾಚಾರ್ ಪಾಳ್ಯ, ದೊಡ್ಡನೆಕ್ಕುಂದಿ, ಮುನ್ನೇಕೊಳಲ (ಮಾರತಹಳ್ಳಿ), ನಲ್ಲೂರುಹಳ್ಳಿ, ಸಿದ್ದಾಪುರ, ನಾಗೊಂಡನಹಳ್ಳಿ, ರಾಮಗೊಂದನಹಳ್ಳಿ, ಚನ್ನಸಂದ್ರ.
ಬನಶಂಕರಿ (ವಿವಿಧ ಹಂತಗಳು), ಕುಮಾರಸ್ವಾಮಿ ಲೇಔಟ್, ಪೂರ್ಣಪ್ರಜ್ಞ ಲೇಔಟ್, ಅಂಜನಾಪುರ, ಗೊಟ್ಟಿಗೆರೆ, ಬೇಗೂರು, ಕಲ್ಲಹಳ್ಳಿ, ಕುಡ್ಲು, ಕೊಡಿಚಿಕ್ಕನಹಳ್ಳಿ.
“ಈ ಅಭಿವೃದ್ಧಿ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು. ಸಾರ್ವಜನಿಕರು ಮುನ್ನೆಚ್ಚರಿಕೆಯಾಗಿ ಅಗತ್ಯವಿರುವಷ್ಟು ನೀರನ್ನು ಮೊದಲೇ ಸಂಗ್ರಹಿಸಿಟ್ಟುಕೊಳ್ಳಿ ಮತ್ತು ನೀರಿನ ಅನಗತ್ಯ ಬಳಕೆಯನ್ನು ತಪ್ಪಿಸಿ,” ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ಕೋರಿದ್ದಾರೆ.



