April 29, 2026
Wednesday, April 29, 2026
spot_img

ಊಟದ ನಂತರ ಮಜ್ಜಿಗೆ ಕುಡಿಯುವ ಅಭ್ಯಾಸ ನಿಮಗಿದೆಯೇ? ಹಾಗಾದ್ರೆ ಮೊದಲು ಇದನ್ನು ಓದಿ

ಭಾರತೀಯ ಮನೆಗಳಲ್ಲಿ ಊಟದ ನಂತರ ಮಜ್ಜಿಗೆ ಕುಡಿಯುವುದು ಒಂದು ಸಾಮಾನ್ಯ ಪದ್ಧತಿ. ಆದರೆ ಹಗಲಿನಲ್ಲಿ ಮಜ್ಜಿಗೆ ಸೇವಿಸುವುದು ಎಷ್ಟು ಪ್ರಯೋಜನಕಾರಿಯೋ, ರಾತ್ರಿಯ ವೇಳೆ ಅದರ ಸೇವನೆ ಕೆಲವರಿಗೆ ಪ್ರಶ್ನೆಯಾಗಿ ಕಾಡುತ್ತದೆ.

ಮಜ್ಜಿಗೆಯಲ್ಲಿರುವ ಪ್ರೊಬಯಾಟಿಕ್ಸ್ ಜೀರ್ಣಾಂಗವ್ಯೂಹವನ್ನು ತಂಪಾಗಿಸುತ್ತದೆ ಮತ್ತು ರಾತ್ರಿ ತಿಂದ ಆಹಾರ ಸುಲಭವಾಗಿ ಜೀರ್ಣವಾಗಲು ನೆರವಾಗುತ್ತದೆ.

ಮಜ್ಜಿಗೆಯಲ್ಲಿರುವ ಅಮಿನೋ ಆಸಿಡ್‌ಗಳು ಒತ್ತಡವನ್ನು ಕಡಿಮೆ ಮಾಡಿ, ಮನಸ್ಸನ್ನು ಶಾಂತಗೊಳಿಸುವ ಮೂಲಕ ಉತ್ತಮ ನಿದ್ರೆ ಬರಲು ಸಹಾಯ ಮಾಡುತ್ತವೆ.

ರಾತ್ರಿ ಮಸಾಲೆಯುಕ್ತ ಆಹಾರ ಸೇವಿಸಿದ್ದರೆ ಉಂಟಾಗುವ ಎದೆಯುರಿ ಅಥವಾ ಅಸಿಡಿಟಿಯನ್ನು ಮಜ್ಜಿಗೆ ನಿಯಂತ್ರಿಸುತ್ತದೆ.

ಆದಾಗ್ಯೂ, ಎಲ್ಲರಿಗೂ ರಾತ್ರಿ ಮಜ್ಜಿಗೆ ಸೂಕ್ತವಲ್ಲ. ಸೈನಸ್, ಅಸ್ತಮಾ ಅಥವಾ ಕೆಮ್ಮಿನ ಸಮಸ್ಯೆ ಇರುವವರು ರಾತ್ರಿ ಮಜ್ಜಿಗೆ ಕುಡಿಯುವುದನ್ನು ತಪ್ಪಿಸಬೇಕು. ಏಕೆಂದರೆ ಇದು ದೇಹದಲ್ಲಿ ಕಫವನ್ನು ಹೆಚ್ಚಿಸಬಹುದು.

ಕೀಲು ನೋವು ಇರುವವರಿಗೆ ಮಜ್ಜಿಗೆಯ ತಂಪು ಗುಣ ನೋವನ್ನು ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆ.

ರಾತ್ರಿ ಮಜ್ಜಿಗೆ ಕುಡಿಯುವಾಗ ಅದಕ್ಕೆ ಸ್ವಲ್ಪ ಶುಂಠಿ ಪುಡಿ, ಜೀರಿಗೆ ಪುಡಿ ಅಥವಾ ಕಾಳುಮೆಣಸಿನ ಪುಡಿ ಸೇರಿಸುವುದು ಉತ್ತಮ. ಇದರಿಂದ ಅದರ ತಂಪು ಗುಣ ಸಮತೋಲನಕ್ಕೆ ಬಂದು ಆರೋಗ್ಯಕ್ಕೆ ಹೆಚ್ಚಿನ ಲಾಭ ನೀಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !