September 24, 2026
Thursday, September 24, 2026
spot_img

ವಾಪಾಸ್ ಕೊಡಿ: ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟ 35,000 ರೂ. ಸಾಲ ವಸೂಲಿಗೆ ಹೊರಟ ಕುಟುಂಬ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಸೀಹೋರ್ ಜಿಲ್ಲೆಯ ಉದ್ಯಮಿ ಕುಟುಂಬವೊಂದು ಮೊದಲ ವಿಶ್ವಯುದ್ಧದ ಸಮಯದಲ್ಲಿ ಬ್ರಿಟಿಷ್ ಆಡಳಿತಕ್ಕೆ ನೀಡಿದ್ದ ₹35,000 ಸಾಲವನ್ನು ಬಡ್ಡಿ ಸಮೇತ ವಾಪಸ್ ಪಡೆಯಲು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. 1917ರಲ್ಲಿ ಸೇಠ್ ಜುಮ್ಮಾ ಲಾಲ್ ರುದಿಯಾ ಸ್ಥಳೀಯ ಬ್ರಿಟಿಷ್ ಸರ್ಕಾರಕ್ಕೆ ಈ ಮೊತ್ತವನ್ನು ಸಾಲವಾಗಿ ನೀಡಿದ್ದರು ಎಂಬ ದಾಖಲೆ ಕುಟುಂಬದವರಿಗೆ ಲಭ್ಯವಾಗಿದೆ.

ಆ ಸಮಯದಲ್ಲಿ ಯುದ್ಧ ವೆಚ್ಚ ಭರಿಸಲು ಬ್ರಿಟಿಷ್ ಸರ್ಕಾರ 5.5 ಶೇಕಡಾ ಬಡ್ಡಿದರದಲ್ಲಿ ಸಾಲಪತ್ರಗಳನ್ನು ಬಿಡುಗಡೆ ಮಾಡಿತ್ತು. ಜೂನ್ 4, 1917ರಂದು ನೀಡಲಾದ ಸಾಲದ ದಾಖಲೆಗಳನ್ನು ಆಧರಿಸಿ, ಉದ್ಯಮಿಯ ಮೊಮ್ಮಗ ವಿವೇಕ್ ರುದಿಯಾ ಬ್ರಿಟಿಷ್ ಸರ್ಕಾರಕ್ಕೆ ಲೀಗಲ್ ನೋಟಿಸ್ ಕಳುಹಿಸುವ ಸಿದ್ಧತೆಯಲ್ಲಿದ್ದಾರೆ.

ಇದನ್ನೂ ಓದಿ:

ಅಂದಿನ ಕಾಲದಲ್ಲಿ ₹35,000 ದೊಡ್ಡ ಮೊತ್ತವಾಗಿತ್ತು. ಸರಾಸರಿ 5.5 ಶೇಕಡಾ ಬಡ್ಡಿದರದಲ್ಲಿ ಲೆಕ್ಕ ಹಾಕಿದರೆ, ಇಂದು ಅದರ ಮೌಲ್ಯ ₹10 ಕೋಟಿ ಮೀರಬಹುದು ಎಂದು ಕುಟುಂಬದವರು ಅಂದಾಜಿಸಿದ್ದಾರೆ. ರೂದಿಯಾ ಕುಟುಂಬ ಭೋಪಾಲ್ ಪ್ರಾಂತ್ಯದಲ್ಲಿ ಬಟ್ಟೆ ಹಾಗೂ ಧಾನ್ಯ ವ್ಯಾಪಾರದಲ್ಲಿ ಪ್ರಮುಖ ಸ್ಥಾನ ಹೊಂದಿದ್ದು, ಆರ್ಥಿಕವಾಗಿ ಪ್ರಭಾವಶಾಲಿಯಾಗಿತ್ತು.

ಇದೀಗ ಇತಿಹಾಸದ ಸಾಲವನ್ನು ಮರುಪಾವತಿಸುವ ವಿಚಾರ ಚರ್ಚೆಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !