February 27, 2026
Friday, February 27, 2026
spot_img

ಪಾಕಿಸ್ತಾನ-ಅಫ್ಘಾನಿಸ್ತಾನ ನಡುವೆ ಘರ್ಷಣೆ: ಭಾರತದ ಮಧ್ಯಪ್ರವೇಶಕ್ಕೆ ಮನವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಘರ್ಷಣೆ ಭುಗಿಲೆದ್ದಿದ್ದು, ಇದರ ಬೆನ್ನಲ್ಲೇ ಅಫ್ಘಾನಿಸ್ತಾನ ಸಂಸತ್ತಿನ ಸದಸ್ಯೆ ಮರಿಯಮ್ ಸೊಲೈಮಾಂಖಿಲ್, ಭಾರತದ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದಾರೆ.

ಪಾಕಿಸ್ತಾನವು ದಶಕಗಳಿಂದ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲ ಮತ್ತು ಅದರ ಅಪಾಯಕಾರಿ ಪರಮಾಣು ಶಸ್ತ್ರಾಗಾರಕ್ಕೆ ಹೊಣೆಗಾರರನ್ನಾಗಿ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕ್ ನ ಮುಖವಾಡ ಬಯಲುಮಾಡಲು ಹಾಗೂ ಜಾಗತಿಕ ನಿರ್ಬಂಧಗಳನ್ನು ಒತ್ತಾಯಿಸಲು ಭಾರತವು ಸಾಕಷ್ಟು ಪ್ರಬಲವಾಗಿದೆ ಎಂದು ಅವರು ಹೇಳಿದರು.

ಪಾಕಿಸ್ತಾನ ಮುಖವಾಡ ಬಯಲು ಮಾಡಲು ಭಾರತವು ಸಾಕಷ್ಟು ಬಲಿಷ್ಠವಾಗಿದೆ. ಒಸಾಮಾ ಬಿನ್ ಲಾಡೆನ್‌ಗೆ ಆಶ್ರಯ ನೀಡಿ ಹಲವು ಭಯೋತ್ಪಾದಕ ಸಂಘಟನೆಗಳನ್ನು ಸೃಷ್ಟಿಸಿದೆ. ಇನ್ನೂ ಅಣ್ವಸ್ತ್ರಗಳನ್ನು ಹೊಂದಿದ್ದು, ಆ ದೇಶಕ್ಕೆ ನಿರ್ಬಂಧ ವಿಧಿಸಬೇಕು. ತಕ್ಷಣವೇ ಅಣ್ವಸ್ತ್ರರಹಿತಗೊಳಿಸಬೇಕು ಎಂದು ಅವರು ಹೇಳಿದರು.

ಪಾಕಿಸ್ತಾನವು ಕಾಬೂಲ್ ಸೇರಿದಂತೆ ಅಪ್ಘಾನಿಸ್ತಾನದ ಪ್ರಮುಖ ನಗರಗಳ ಮೇಲೆ ಬಾಂಬ್ ದಾಳಿ ನಡೆಸಿತು. ತಿಂಗಳುಗಳ ಕಾಲ ನಡೆದ ಪರಸ್ಪರ ಸಂಘರ್ಷಗಳ ನಂತರ ಪಾಕಿಸ್ತಾನದ ರಕ್ಷಣಾ ಸಚಿವರು ಮುಕ್ತ ಯುದ್ಧ ಘೋಷಿಸಿದರು.ಇತ್ತ ಇಸ್ಲಾಮಾಬಾದ್ ನಡೆಸಿದ ವಾಯುದಾಳಿಗಳಿಗೆ ಪ್ರತೀಕಾರವಾಗಿ ಅಫ್ಘಾನ್ ಪಡೆಗಳು ಪಾಕಿಸ್ತಾನಿ ಗಡಿ ಪಡೆಗಳ ಮೇಲೆ ದಾಳಿ ನಡೆಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !