ಮನೆಯಲ್ಲಿ ಬೇಗ ಮಾಡಬಹುದಾದ, ರುಚಿ ಮತ್ತು ಪೌಷ್ಟಿಕಾಂಶ ತುಂಬಿದ ಡಿಶ್ ಬೇಕಾ? ಆಗ ಈ ಪನೀರ್ ಭುರ್ಜಿ ಗ್ರೇವಿ ಟ್ರೈ ಮಾಡಿ. ಚಪಾತಿ, ರೊಟ್ಟಿ, ಪೂರಿ ಅಥವಾ ಅನ್ನದ ಜೊತೆ ಅದ್ಭುತವಾಗಿ ಸವಿಯಬಹುದು.
ಬೇಕಾಗುವ ಸಾಮಗ್ರಿಗಳು:
ಪನೀರ್ – 200 ಗ್ರಾಂ (ತುರಿದದ್ದು)
ಈರುಳ್ಳಿ – 2 (ಸಣ್ಣವಾಗಿ ಕತ್ತರಿಸಿದ)
ಟೊಮಾಟೊ – 2 (ಚೂರು ಮಾಡಿದ)
ಹಸಿಮೆಣಸಿನಕಾಯಿ – 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಅರಿಶಿಣ – ¼ ಚಮಚ
ಮೆಣಸಿನಪುಡಿ – 1 ಚಮಚ
ಧನಿಯಾ ಪುಡಿ – 1 ಚಮಚ
ಗರಂ ಮಸಾಲಾ – ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ/ಬೆಣ್ಣೆ – 2 ಚಮಚ
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ವಿಧಾನ:
ಮೊದಲು ತವಾದಲ್ಲಿ ಎಣ್ಣೆ ಅಥವಾ ಬೆಣ್ಣೆ ಬಿಸಿ ಮಾಡಿ. ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ.
ಇದಕ್ಕೆ ಟೊಮಾಟೊ, ಅರಿಶಿಣ, ಮೆಣಸಿನಪುಡಿ, ಧನಿಯಾ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿ. ಮಸಾಲೆ ಎಣ್ಣೆ ಬಿಡುವಷ್ಟು ಸಣ್ಣ ಉರಿಯಲ್ಲಿ ಬೇಯಿಸಿದ ಬಳಿಕ ತುರಿದ ಪನೀರ್ ಸೇರಿಸಿ ನಿಧಾನವಾಗಿ ಕಲಸಿ.
ಕೊನೆಗೆ ಗರಂ ಮಸಾಲಾ ಮತ್ತು ಸ್ವಲ್ಪ ನೀರು ಸೇರಿಸಿ 3-4 ನಿಮಿಷ ಕುದಿಸಿ. ಮೇಲಿಂದ ಕೊತ್ತಂಬರಿ ಸೊಪ್ಪು ಹಾಕಿ ಸರ್ವ್ ಮಾಡಿ.
ಬಿಸಿ ಬಿಸಿ ಪನೀರ್ ಭುರ್ಜಿ ಗ್ರೇವಿ ಸವಿಯಲು ಸಿದ್ಧ!



