April 17, 2026
Friday, April 17, 2026
spot_img

Weight Loss Tips | ತೂಕ ಇಳಿಸಿಕೊಳ್ಳುವವರಿಗೆ ಕುಡಿಯೋಕೆ ಬಿಸಿ ನೀರು ಒಳ್ಳೆದಾ ಅಥವಾ ತಣ್ಣೀರು ಒಳ್ಳೆದಾ?

ತೂಕ ಇಳಿಸಿಕೊಳ್ಳಬೇಕು ಅನ್ನೋ ಗುರಿ ಇಟ್ಟಾಗ ಆಹಾರ ನಿಯಂತ್ರಣ, ವ್ಯಾಯಾಮ ಜೊತೆಗೆ ನೀರು ಕುಡಿಯುವ ವಿಧಾನವೂ ಮುಖ್ಯವಾಗುತ್ತದೆ. “ಬಿಸಿ ನೀರು ಕುಡಿದರೆ ಬೇಗ ಸಣ್ಣಗಾಗುತ್ತೇವಾ?” ಅಥವಾ “ತಣ್ಣೀರು ಮೆಟಾಬಾಲಿಸಂ ಹೆಚ್ಚಿಸುತ್ತಾ?” ಎಂಬ ಹಲವು ಪ್ರಶ್ನೆ ಖಂಡಿತ ಬಂದೆ ಬರುತ್ತೆ. ಆದರೆ ವಾಸ್ತವ ಏನು ಗೊತ್ತಾ?

ಮೊದಲಿಗೆ, ಬಿಸಿ ನೀರು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ದೇಹದಲ್ಲಿರುವ ವಿಷಾಂಶ ಹೊರಹಾಕಲು ನೆರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ಹೊಟ್ಟೆ ತುಂಬಿದ ಭಾವನೆ ನೀಡುವುದರಿಂದ ಅತಿಯಾಗಿ ತಿನ್ನುವ ಪ್ರವೃತ್ತಿ ಕಡಿಮೆಯಾಗಬಹುದು.

ಇದನ್ನೂ ಓದಿ:

ಇನ್ನೊಂದೆಡೆ, ತಣ್ಣೀರು ಕುಡಿದಾಗ ದೇಹವು ಅದನ್ನು ದೇಹದ ತಾಪಮಾನಕ್ಕೆ ತರುವ ಪ್ರಕ್ರಿಯೆಯಲ್ಲಿ ಸ್ವಲ್ಪ ಕ್ಯಾಲೊರಿಗಳನ್ನು ಖರ್ಚು ಮಾಡುತ್ತದೆ. ಆದರೆ ಈ ಪ್ರಮಾಣ ಬಹಳ ಕಡಿಮೆ. ಅಂದರೆ ತಣ್ಣೀರು ಕುಡಿಯುವುದರಿಂದ ಮಾತ್ರ ತೂಕ ಕಡಿಮೆಯಾಗುವುದಿಲ್ಲ.

ಮುಖ್ಯ ವಿಷಯ ಏನೆಂದರೆ ನೀರು ಯಾವ ತಾಪಮಾನದಲ್ಲಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವುದು ಅಗತ್ಯ. ದಿನಕ್ಕೆ ಕನಿಷ್ಠ 2–3 ಲೀಟರ್ ನೀರು ಸೇವಿಸಿದರೆ ದೇಹದ ಮೆಟಾಬಾಲಿಸಂ ಸರಾಗವಾಗಿ ನಡೆಯುತ್ತದೆ. ವಿಶೇಷವಾಗಿ ವ್ಯಾಯಾಮ ಮಾಡುವವರು ನೀರಿನ ಕೊರತೆ ಉಂಟಾಗದಂತೆ ಗಮನಿಸಬೇಕು.

ಹೀಗಾಗಿ ತೂಕ ಇಳಿಕೆಗೆ ಬಿಸಿ ನೀರು ಅಥವಾ ತಣ್ಣೀರು ಎನ್ನುವುದಕ್ಕಿಂತ ನಿಯಮಿತ ವ್ಯಾಯಾಮ, ಸಮತೋಲನ ಆಹಾರ ಮತ್ತು ಸರಿಯಾದ ನೀರಿನ ಸೇವನೆ ಮುಖ್ಯ. ನಿಮ್ಮ ದೇಹಕ್ಕೆ ಹೊಂದುವ ವಿಧಾನವನ್ನು ಆರಿಸಿಕೊಂಡರೆ ಉತ್ತಮ ಫಲಿತಾಂಶ ಕಾಣಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !