March 1, 2026
Sunday, March 1, 2026
spot_img

ಇಸ್ರೇಲ್ -ಇರಾನ್ ಯುದ್ಧ ಕಾರ್ಮೋಡ: ಮಂಗಳೂರಿನಿಂದ ಗಲ್ಫ್ ರಾಷ್ಟ್ರಗಳತ್ತ ವಿಮಾನ ಹಾರಾಟ ಸ್ಥಗಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್- ಇರಾನ್ ನಡುವೆ ಯುದ್ಧದ ಬಿಸಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ತಟ್ಟಿದೆ.

ಯುದ್ಧದ ಪರಿಣಾಮವಾಗಿ ಮಂಗಳೂರು ವಿಮಾನ ನಿಲ್ದಾಣದಿಂದ ಶನಿವಾರ ಗಲ್ಪ್ ರಾಷ್ಟ್ರಗಳಿಗೆ ತೆರಳುವ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ಯಾವೆಲ್ಲಾ ವಿಮಾನ ರದ್ದು?
ಮಂಗಳೂರು ವಿಮಾನ ನಿಲ್ದಾಣದಿಂದ 1.20ಕ್ಕೆ ಹೊರಡಬೇಕಿದ್ದ ಐಎಕ್ಸ್ 831 ಮಂಗಳೂರು- ದುಬೈ ವಿಮಾನ, 11.10ಕ್ಕೆ ಹೊರಡಬೇಕಿದ್ದ ಐಎಕ್ಸ್ 847 ಮಂಗಳೂರು- ದಮ್ಮಾಮ್ ವಿಮಾನ, 8.15ಕ್ಕೆ ಹೊರಡಬೇಕಿದ್ದ್ದ ಐಎಕ್ಸ್ 813 ಮಂಗಳೂರು- ದುಬೈ ವಿಮಾನ, 2.05ಕ್ಕೆ ಹೊರಡಬೇಕಿದ್ದ ಐಎಕ್ಸ್ 851 ಮಂಗಳೂರು- ಕುವೈತ್ ವಿಮಾನ, 1.20ಕ್ಕೆ ಹೊರಡಬೇಕಿದ್ದ ಐಎಕ್ಸ್ 815 ಮಂಗಳೂರು- ಅಬುಧಾಬಿ ವಿಮಾನ, 7.15ಕ್ಕೆ ಹೊರಡಬೇಕಿದ್ದ ಐಎಕ್ಸ್ 1467 ಮಂಗಳೂರು- ದುಬೈ ವಿಮಾನ ಸಂಚಾರವನ್ನು ರದ್ದು ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !