August 31, 2026
Monday, August 31, 2026
spot_img

ನಡುಕ ಹೆಚ್ಚಿಸುತ್ತಿದೆ ಯುದ್ಧ: ಸಧ್ಯ ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರ ಸಂಖ್ಯೆ ಎಷ್ಟು ಅಂತ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುದ್ಧ ಕಾರ್ಮೋಡ ಇನ್ನಷ್ಟು ದಟ್ಟವಾಗುತ್ತಿದ್ದಂತೆಯೇ ಅಮೆರಿಕ ಮಿಲಿಟರಿ ನೆಲೆಗಳನ್ನು ಹೊಂದಿರುವ ಅಥವಾ ಇರಾನ್ ದಾಳಿಗೆ ಗುರಿಯಾಗಿರುವ ಪ್ರದೇಶಗಳಲ್ಲಿ ನಡುಕ ಹೆಚ್ಚತೊಡಗಿದೆ.

ಈ ನಡುವೆ ಇಂತಹಾ ಪ್ರದೇಶಗಳಲ್ಲಿ ಭಾರತೀಯರೂ ವಾಸಿಸುತ್ತಿದ್ದು, ಅವರ ಸುರಕ್ಷತೆಯ ಚಿಂತೆ ಕಾಡುತ್ತಿದೆ. ಮೂಲಗಳ ಮಾಹಿತಿ ಪ್ರಕಾರ ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಭಾರತೀಯರು ವಾಸಿಸುತ್ತಿದ್ದಾರೆ. ಇವರಲ್ಲಿ ಯುಎಇ ನಲ್ಲಿ 38.9 ಲಕ್ಷ ಮಂದಿ ಭಾರತೀಯರಿದ್ದರೆ, ಸೌದಿ ಅರೇಬಿಯಾದಲ್ಲಿ 26.5 ಲಕ್ಷ ಮಂದಿ ಇದ್ದಾರೆ.

ಇನ್ನು ಕುವೈತ್‌ನಲ್ಲಿ 10 ಲಕ್ಷ ಮಂದಿ, ಕತಾರ್‌ನಲ್ಲಿ 83 ಲಕ್ಷ ಮಂದಿ, ಒಮನ್‌ನಲ್ಲಿ 66 ಲಕ್ಷ ಮಂದಿ ಹಾಗೂ ಬಹ್ರೇನ್‌ನಲ್ಲಿ 33 ಲಕ್ಷ ಮಂದಿ ಭಾರತೀಯರು ವಾಸಿಸುತ್ತಿದ್ದಾರೆ ಎಂಬ ಲೆಕ್ಕಾಚಾರವಿದೆ.

ಯುದ್ಧ, ದಾಳಿಗಳ ಬಗ್ಗೆ ಮಾಹಿತಿಗಳು ಒಂದೊಂದಾಗಿ ಹೊರಬುತ್ತಿದ್ದಂತೆಯೇ ಇತ್ತ ಭಾರತದಲ್ಲಿ ಕೂಡಾ ಆತಂಕ ಹೆಚ್ಚುತ್ತಿದೆ. ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಇಲ್ಲಿನ ನಾಗರಿಕರ ಮನೆಮಂದಿ, ಬಂಧುಬಳಗ ಕಳವಳದಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !