March 1, 2026
Sunday, March 1, 2026
spot_img

ಪಲ್ಯ, ಗ್ರೇವಿ & More 22 | ಜಿಂಜರ್ ಚಿಕನ್ ಮಸಾಲಾ: ಮನೆಯಲ್ಲೇ ರೆಸ್ಟೋರೆಂಟ್ ಸ್ಟೈಲ್ ರುಚಿ

ಚಿಕನ್ ಪ್ರಿಯರಿಗೆ ಜಿಂಜರ್ ಚಿಕನ್ ಮಸಾಲಾ ಒಂದು ವಿಶೇಷವಾದ ರುಚಿ ನೀಡುವ ಡಿಶ್. ರೊಟ್ಟಿ, ಚಪಾತಿ, ನಾನ್ ಅಥವಾ ಅನ್ನದ ಜೊತೆ ಇದನ್ನು ಸವಿಯಬಹುದು. ಮನೆಲ್ಲೇ ಸುಲಭವಾಗಿ ರೆಸ್ಟೋರೆಂಟ್ ಸ್ಟೈಲ್ ರುಚಿಯಲ್ಲಿ ಈ ಜಿಂಜರ್ ಚಿಕನ್ ಮಸಾಲಾ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:

ಚಿಕನ್ – 500 ಗ್ರಾಂ
ಶುಂಠಿ (ಜಜ್ಜಿದ್ದು) – 3 ಟೇಬಲ್ ಸ್ಪೂನ್
ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಸ್ಪೂನ್
ಈರುಳ್ಳಿ (ಸಣ್ಣಗೆ ಕತ್ತರಿಸಿದ) – 2
ಟೊಮೇಟೊ (ಸಣ್ಣಗೆ ಕತ್ತರಿಸಿದ) – 2
ಹಸಿಮೆಣಸು – 2
ಅರಿಶಿನ ಪುಡಿ – ½ ಟೀ ಸ್ಪೂನ್
ಮೆಣಸಿನ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಮೊಸರು – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 3 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ:
ಮೊದಲು ಚಿಕನ್ ತುಂಡುಗಳಿಗೆ ಉಪ್ಪು, ಅರಿಶಿನ, ಮೆಣಸಿನ ಪುಡಿ ಮತ್ತು ಮೊಸರು ಹಾಕಿ 20 ನಿಮಿಷ ಮೆರಿನೇಟ್ ಮಾಡಿ.

ಬಾಣಲೆಗೆ ಎಣ್ಣೆ ಹಾಕಿ ಬಿಸಿ ಆದ ನಂತರ ಈರುಳ್ಳಿ ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ.

ನಂತರ ಬೆಳ್ಳುಳ್ಳಿ ಪೇಸ್ಟ್, ಜಜ್ಜಿದ ಶುಂಠಿ ಹಾಗೂ ಹಸಿಮೆಣಸು ಹಾಕಿ ಸುವಾಸನೆ ಬರುವವರೆಗೆ ಹುರಿಯಿರಿ.

ಈಗ ಟೊಮೇಟೊ ಸೇರಿಸಿ ಮೃದುವಾಗುವವರೆಗೆ ಬೇಯಿಸಿ. ನಂತರ ಧನಿಯಾ ಪುಡಿ, ಗರಂ ಮಸಾಲಾ ಹಾಕಿ ಚೆನ್ನಾಗಿ ಕಲಸಿ.

ಮೆರಿನೇಟ್ ಮಾಡಿದ ಚಿಕನ್ ಸೇರಿಸಿ ಮಧ್ಯಮ ಉರಿಯಲ್ಲಿ ಮುಚ್ಚಿ 20-25 ನಿಮಿಷ ಬೇಯಿಸಿ. ಮಧ್ಯೆ ಮಧ್ಯೆ ಕೈಯಾಡಿಸಿ ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !