April 18, 2026
Saturday, April 18, 2026
spot_img

‘ಹಯಗ್ರೀವ’ನ ಓಟಕ್ಕೆ ಅಡ್ಡಗಾಲು: ವಿರೋಧಿಗಳ ‘ಪ್ರೀತಿ’ಗೆ ನಟ ಧನ್ವೀರ್ ಗೌಡ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್

ಫೆಬ್ರವರಿ 27ರಂದು ಸಂಭ್ರಮದಿಂದ ತೆರೆಗೆ ಬರಬೇಕಿದ್ದ ಧನ್ವೀರ್ ಗೌಡ ಅಭಿನಯದ ‘ಹಯಗ್ರೀವ’ ಚಿತ್ರಕ್ಕೆ ಆರಂಭದಲ್ಲೇ ವಿಘ್ನ ಎದುರಾಯಿತು. ಇಡೀ ದಿನ ಅಭಿಮಾನಿಗಳು ಕಾಯುವಂತೆ ಮಾಡಿದ ತಾಂತ್ರಿಕ ಅಥವಾ ಆಂತರಿಕ ತೊಂದರೆಗಳು ಸಂಜೆಯ ಹೊತ್ತಿಗೆ ಬಗೆಹರಿದವು.

ಈ ವಿಳಂಬದ ಬಗ್ಗೆ ಮಾತನಾಡಿದ ಧನ್ವೀರ್, ತಮ್ಮ ವಿರೋಧಿಗಳ ವಿರುದ್ಧ ನಯವಾಗಿಯೇ ಚಾಟಿ ಬೀಸಿದ್ದಾರೆ. “ನನ್ನ ಸಿನಿಮಾ ತಡೆದವರನ್ನು ನಾನು ವಿರೋಧಿಗಳು ಎನ್ನಲ್ಲ, ಅವರು ನನ್ನ ಮೇಲೆ ಅಪಾರ ಪ್ರೀತಿ ಉಳ್ಳವರು. ನನ್ನ ಮೇಲೆ ಅವರಿಗಿರುವ ಆ ಪ್ರೀತಿಯನ್ನು ತೋರಿಸಿದ್ದಾರೆ. ನಾನೂ ಕೂಡ ಪ್ರೀತಿ ತೋರಿಸುವ ಕಾಲ ಬಂದಾಗ ಆ ಭಗವಂತನೇ ಎಲ್ಲವನ್ನೂ ನೋಡ್ಕೊಳ್ತಾನೆ” ಎನ್ನುವ ಮೂಲಕ ತಮ್ಮ ಸಿನಿಮಾ ಬಿಡುಗಡೆಗೆ ತೊಂದರೆ ಕೊಟ್ಟವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !