November 3, 2026
Tuesday, November 3, 2026
spot_img

ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ: ತಂದೆಯ ಕಣ್ಣೆದುರೇ ಪ್ರಾಣಬಿಟ್ಟ ಮಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತಂದೆಯೊಂದಿಗೆ ಸ್ಕೂಟರ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ದ್ವಿತೀಯ ಪಿಯು ವಿದ್ಯಾರ್ಥಿನಿ KSRTC ಬಸ್ ಡಿಕ್ಕಿಗೆ ಬಲಿಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಅಶೋಕ ರಸ್ತೆ–ಶ್ರೀಹರ್ಷ ರಸ್ತೆ ಜಂಕ್ಷನ್‌ನಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಎನ್.ಆರ್. ಮೊಹಲ್ಲಾದ ಮರಳಿ ಸರ್ಕಲ್ ಸಮೀಪದ ನಿವಾಸಿಗಳಾದ ವೆಂಕಟೇಶ್ ನಾಯಕ್ ಮತ್ತು ಜ್ಯೋತಿ ದಂಪತಿಯ ಏಕೈಕ ಪುತ್ರಿ ವೈಷ್ಣವಿ (17) ಎಂದು ಗುರುತಿಸಲಾಗಿದೆ. ಅವರು ಸದ್ವಿದ್ಯಾ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ದ್ವಿತೀಯ ಪಿಯು ಓದುತ್ತಿದ್ದರು.

ಬೆಳಗ್ಗೆ ಸುಮಾರು 7.30ಕ್ಕೆ ವೆಂಕಟೇಶ್ ಅವರು ಸ್ಕೂಟರ್‌ನಲ್ಲಿ ಮಗಳೊಂದಿಗೆ ಅಶೋಕ ರಸ್ತೆಯಿಂದ ಚಾಮರಾಜ ಸರ್ಕಲ್ ಕಡೆಗೆ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ KSRTC ಬಸ್ (KA-09-F-5706) ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ತಂದೆ-ಮಗಳು ರಸ್ತೆಗೆ ಬಿದ್ದಿದ್ದು, ಬಸ್ ವೈಷ್ಣವಿ ಅವರ ತಲೆಯ ಮೇಲೆ ಹರಿದಿದೆ. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ವೆಂಕಟೇಶ್ ಅವರ ಎಡಗೈಗೆ ಗಾಯವಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Must Read

Skip to toolbar