March 1, 2026
Sunday, March 1, 2026
spot_img

FOOD | ಆಲೂಗೆಡ್ಡೆ ಅವಲಕ್ಕಿ ಇದ್ರೆ ಸಾಕು ಗರಿಗರಿಯಾದ ಬೋಂಡಾ ರೆಡಿ ಆಗುತ್ತೆ

ಮನೆಗೆ ಅತಿಥಿಗಳು ಬಂದಾಗಲೋ ಅಥವಾ ಮಕ್ಕಳು ಶಾಲೆಯಿಂದ ಬಂದ ನಂತರ ಅವರಿಗೆ ತಿನ್ನೋಕೆ ಬೇಗ ತಯಾರಿಸಬಹುದಾದ ಸರಳ ತಿಂಡಿ ಅಂದ್ರೆ ಅದು ಈ ಬೋಂಡಾ. ಆಲೂಗೆಡ್ಡೆ ಮತ್ತು ಅವಲಕ್ಕಿ ಇದ್ದರೆ ಸಾಕು, ರುಚಿಕರವಾದ ಗರಿಗರಿಯಾದ ಬೋಂಡಾ ಸಿದ್ಧವಾಗುತ್ತದೆ.

ಬೇಕಾಗುವ ಪದಾರ್ಥಗಳು

ಬೇಯಿಸಿದ ಆಲೂಗೆಡ್ಡೆ – 2
ಅವಲಕ್ಕಿ – 1 ಕಪ್
ಈರುಳ್ಳಿ ಸಣ್ಣವಾಗಿ ಕತ್ತರಿಸಿದ – 1
ಹಸಿಮೆಣಸು – 2
ಶುಂಠಿ ತುರಿ – 1 ಚಿಕ್ಕ ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಜೀರಿಗೆ – ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಅಕ್ಕಿ ಹಿಟ್ಟು – 2 ಚಮಚ
ಎಣ್ಣೆ – ಕರಿಯಲು

ಮಾಡುವ ವಿಧಾನ

ಅವಲಕ್ಕಿಯನ್ನು ತೊಳೆದು ನೀರು ತೆಗೆಯಿರಿ. ಆಲೂಗೆಡ್ಡೆಯನ್ನು ಚೆನ್ನಾಗಿ ಹಿಸುಕಿ ಅದಕ್ಕೆ ಅವಲಕ್ಕಿ, ಈರುಳ್ಳಿ, ಹಸಿಮೆಣಸು, ಶುಂಠಿ, ಜೀರಿಗೆ, ಉಪ್ಪು ಮತ್ತು ಕೊತ್ತಂಬರಿ ಹಾಕಿ ಕಲಸಿ. ಅಗತ್ಯವಿದ್ದರೆ ಅಕ್ಕಿ ಹಿಟ್ಟು ಸೇರಿಸಿ ಗಟ್ಟಿ ಮಿಶ್ರಣ ಮಾಡಿಕೊಳ್ಳಿ.

ನಿಮಗೆ ಬೇಕಾದ ಆಕಾರ ಕೊಟ್ಟು ಬಿಸಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಬಂಗಾರದ ಬಣ್ಣ ಬರುವವರೆಗೆ ಕರಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !