ಉತ್ತರ ಭಾರತದ ಖಾಸಗಿ ರುಚಿಯನ್ನು ಮನೆಯಲ್ಲಿ ಸವಿಯಬೇಕು ಅನ್ನೋರಿಗೆ ಪಂಜಾಬಿ ಸ್ಟೈಲ್ ಚೋಲೆ ಮಸಾಲಾ ತಿನ್ನಿಸಿ. ಚಪಾತಿ, ಪೂರಿ ಅಥವಾ ಅನ್ನದ ಜೊತೆಗೆ ಸವಿಯಲು ಈ ಚೋಲೆ ಮಸಾಲಾ ಅದ್ಭುತ ಜೋಡಿ. ಈಗ ಮನೆಯಲ್ಲೇ ಸಿಂಪಲ್ ಆಗಿ ಹೇಗೆ ಮಾಡೋದು ನೋಡೋಣ.
ಬೇಕಾಗುವ ಸಾಮಗ್ರಿಗಳು
ಕಾಬುಲ್ ಕಡಲೆ – 1 ಕಪ್ (ರಾತ್ರಿ ಪೂರ್ತಿ ನೆನೆಸಿದದ್ದು)
ಈರುಳ್ಳಿ – 2
ಟೊಮ್ಯಾಟೊ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಹಸಿಮೆಣಸಿನಕಾಯಿ – 1
ಅರಿಶಿನ ಪುಡಿ – ½ ಟೀ ಸ್ಪೂನ್
ಮೆಣಸಿನ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಜೀರಿಗೆ ಪುಡಿ – ½ ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಚೋಲೆ ಮಸಾಲಾ ಪುಡಿ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ವಿಧಾನ
ನೆನೆಸಿದ ಕಡಲೆಗೆ ಸ್ವಲ್ಪ ಉಪ್ಪು ಹಾಕಿ ಪ್ರೆಶರ್ ಕುಕ್ಕರ್‌ನಲ್ಲಿ 4-5 ವಿಶಿಲ್ ಬರುವವರೆಗೆ ಚೆನ್ನಾಗಿ ಬೇಯಿಸಿ.
ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ ಹಾಕಿ ಬಂಗಾರದ ಬಣ್ಣ ಬರುವವರೆಗೆ ಕರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
ಈಗ ಟೊಮ್ಯಾಟೊ ಪೇಸ್ಟ್ ಹಾಕಿ ಎಣ್ಣೆ ಬೇರ್ಪಡುವವರೆಗೆ ಬೇಯಿಸಿ. ಅರಿಶಿನ, ಮೆಣಸಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ ಮತ್ತು ಚೋಲೆ ಮಸಾಲಾ ಪುಡಿ ಹಾಕಿ ಕಲಸಿ.
ಬೇಯಿಸಿದ ಕಡಲೆ ಮತ್ತು ಅದರಲ್ಲಿ ಇರುವ ಸ್ವಲ್ಪ ನೀರು ಸೇರಿಸಿ 8-10 ನಿಮಿಷ ಮಂದ ಉರಿಯಲ್ಲಿ ಕುದಿಯಲು ಬಿಡಿ. ಕೊನೆಯಲ್ಲಿ ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ.
ಸರ್ವ್ ಮಾಡುವಾಗ ಮೇಲೆ ಕೊತ್ತಂಬರಿ ಸೊಪ್ಪು ಹಾಕಿದರೆ ಬಿಸಿ ಬಿಸಿ ಚೋಲೆ ಮಸಾಲಾ ರೆಡಿ.



