October 20, 2026
Tuesday, October 20, 2026
spot_img

ಹಬ್ಬದ ಸಮಯದಲ್ಲಿ ಸಿಹಿ ತಿನ್ನಬೇಕು ಅನ್ನೋ ಆಸೆ ಇದೆಯಾ? ಮಧುಮೇಹಿಗಳಿಗಾಗಿ ಸ್ಪೆಷಲ್‌ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು

ಖರ್ಜೂರ
ಹಾಲು
ಗೋಡಂಬಿ
ಬಾದಾಮಿ
ತುಪ್ಪ
ಏಲಕ್ಕಿ ಪುಡಿ
ಶ್ಯಾವಿಗೆ/ಸಾಬುದಾನ

ಮಾಡುವ ವಿಧಾನ

ಮೊದಲು ಬಿಸಿ ನೀರಿನಲ್ಲಿ ಖರ್ಜೂರಗಳನ್ನು ನೆನೆಸಿ ಇಟ್ಟುಕೊಳ್ಳಿ. ಅವು ಮೆತ್ತಗಾದ ನಂತರ ಮಿಕ್ಸಿಯಲ್ಲಿ ರುಬ್ಬಿ ಇಡಿ.

ಆನಂತರ ಪಾತ್ರೆಗೆ ತುಪ್ಪ ಹಾಕಿ ಬಾದಾಮಿ, ಗೋಡಂಬಿ, ದ್ರಾಕ್ಷಿಯನ್ನು ಹುರಿದುಕೊಳ್ಳಿ. ನಂತರ ಅದನ್ನು ಒಂದು ಬಟ್ಟಲಿಗೆ ತೆಗೆಯಿರಿ.

ನಂತರ ಅದೇ ತುಪ್ಪಕ್ಕೆ ಹಾಲು ಹಾಕಿ, ಖರ್ಜೂರದ ಪೇಸ್ಟ್‌ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಜೊತೆಗೆ ಏಲಕ್ಕಿ ಪುಡಿ ಹಾಕಿ

ನಿಮಗೆ ಶ್ಯಾವಿಗೆ ಇಷ್ಟವಿದ್ದಲ್ಲಿ ಶ್ಯಾವಿಗೆ ಅಥವಾ ಸಾಬುದಾನ ಇಷ್ಟವಿದ್ದಲ್ಲಿ ಸಾಬುದಾನ ಹಾಕಿ ಬೇಯಿಸಿದರೆ ಪಾಯಸ ರೆಡಿ

Must Read