ನಾವು ಏನಾದರೂ ಮಾತನಾಡುವ ಮೊದಲು, ಒಂದು ನಿರ್ಧಾರ ತೆಗೆದುಕೊಳ್ಳುವ ಮೊದಲು, “ಇದರಿಂದ ಯಾರಿಗಾದರೂ ಬೇಸರವಾಗುತ್ತದೆಯಾ?” ಎಂದು ಯೋಚಿಸುವುದು ಸಹಜ. ಆದರೆ ಅದೇ ಯೋಚನೆ ನಿಧಾನವಾಗಿ ಒತ್ತಡವಾಗಿಬಿಟ್ಟರೆ? ಎಲ್ಲರಿಗೂ ಇಷ್ಟವಾಗಬೇಕು ಎಂಬ ಆಸೆ ಒಂದು ಮಟ್ಟಿಗೆ ಒಳ್ಳೆಯದು. ಆದರೆ ಅದು ನಮ್ಮ ನಿಜಸ್ವಭಾವವನ್ನೇ ಮರೆಮಾಚುವ ಮಟ್ಟಿಗೆ ಹೋದರೆ, ನಾವು ನಮ್ಮನ್ನೇ ಕಳೆದುಕೊಳ್ಳುತ್ತೇವೆ.
ಆದರೆ ಒಂದು ಕ್ಷಣ ಯೋಚಿಸಿ… ಎಲ್ಲರಿಗೂ ಇಷ್ಟವಾಗುವಂತೆ ಬದುಕೋದು ಸಾಧ್ಯವೇ?
ಪ್ರತಿಯೊಬ್ಬರ ಅಭಿಪ್ರಾಯ ವಿಭಿನ್ನ. ಎಲ್ಲರಿಗೂ ಒಂದೇ ರೀತಿಯಲ್ಲಿ ಕಾಣಿಸುವುದು ಅಸಾಧ್ಯ. ಯಾರಿಗಾದರೂ ನೀವು ಸರಿಯಾಗಿರಬಹುದು, ಇನ್ನೊಬ್ಬರಿಗೆ ತಪ್ಪಾಗಿರಬಹುದು. ಅದು ನಿಮ್ಮ ಮೌಲ್ಯವನ್ನು ಕಡಿಮೆ ಮಾಡುವುದಿಲ್ಲ. ಆದರೆ ಎಲ್ಲರ ಮೆಚ್ಚುಗೆಯಿಗಾಗಿ ಬದುಕಲು ಶುರು ಮಾಡಿದರೆ, ನಮ್ಮ ನಿರ್ಧಾರಗಳು ನಮ್ಮ ಹೃದಯದಿಂದ ಅಲ್ಲ, ಅವರ ನಿರೀಕ್ಷೆಯಿಂದ ಬರುತ್ತವೆ.
ಇದನ್ನೂ ಓದಿ:
ಜೀವನದಲ್ಲಿ ಮೆಚ್ಚುಗೆಗಿಂತ ಮುಖ್ಯವಾದುದು ಮನಸ್ಸಿನ ಶಾಂತಿ. ಎಲ್ಲರಿಗೂ ಇಷ್ಟವಾಗುವುದಕ್ಕಿಂತ, ನಿಮ್ಮಂತೆಯೇ ಇರುವುದು ಮುಖ್ಯ. ಕೆಲವರು ನಿಮ್ಮನ್ನು ಅರ್ಥಮಾಡಿಕೊಳ್ಳಬಹುದು, ಕೆಲವರು ಅರ್ಥಮಾಡಿಕೊಳ್ಳಲಾರರು. ಅದೂ ಸಹಜವೇ.
ಕೊನೆಯಲ್ಲಿ, ಪ್ರಶ್ನೆ ಒಂದೇ ನೀವು ನಿಮ್ಮ ಜೀವನವನ್ನು ಬದುಕುತ್ತೀದ್ದೀರಾ, ಅಥವಾ ಇತರರ ಅಭಿಪ್ರಾಯವನ್ನಾ? ನಿಜವಾದ ಸಂತೋಷ ಎಲ್ಲರ ಮೆಚ್ಚುಗೆಯಲ್ಲಿ ಅಲ್ಲ, ಸ್ವತಃನ ಸ್ವೀಕಾರದಲ್ಲಿ ಇದೆ.



