September 27, 2026
Sunday, September 27, 2026
spot_img

ಬುರ್ಜ್‌ ಖಲೀಫಾ ಮುಂದೆ ಮಗಳ ಬರ್ಥ್‌ಡೇ ಸೆಲೆಬ್ರೇಷನ್‌, ಬೆಂಗಳೂರಿಗೆ ಬರುವಾಗ ದಾಳಿ! ಫ್ಯಾಮಿಲಿ ಅಲ್ಲೇ ಲಾಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಗಳ ಹುಟ್ಟುಹಬ್ಬ ಆಚರಿಸೋದಕ್ಕೆ ದುಬೈ ಪ್ರವಾಸ ಹೋಗಿದ್ದ ದಂಪತಿ ಅಲ್ಲಿಯೇ ಲಾಕ್‌ ಆಗಿದ್ದಾರೆ.

ಇರಾನ್‌-ಇಸ್ರೇಲ್‌ ಯುದ್ಧದ ಪರಿಣಾಮವಾಗಿ ಈ ಕುಟುಂಬ ಅಬುಧಾಬಿಯಲ್ಲಿ ಲಾಕ್‌ ಆಗಿದೆ. ಫೆ.ಫೆ.23ರಂದು ಬೆಂಗಳೂರಿನಿಂದ ದುಬೈಗೆ ಹೋಗಿದ್ದ ಕಿರಣ್‌ ಹಾಗೂ ಸುನೀತಾ ದಂಪತಿ ಮಗಳನ್ನು ಖುಷಿ ಪಡಿಸೋಕೆ ನಿರ್ಧರಿಸಿದ್ದರು. ಬುರ್ಜ್‌ ಖಲೀಫಾ ಮುಂದೆ ಮಗಳ ಬರ್ಥ್‌ಡೇ ಆಚರಿಸಿದ್ದರು.

ಶನಿವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸೋಕೆ ಫ್ಲೈಟ್‌ ಬುಕ್‌ ಆಗಿತ್ತು. ಏರ್‌ಪೋರ್ಟ್‌ಗೆ ಆಗಮಿಸಿ ಇಮಿಗ್ರೇಷನ್‌ ಮುಗಿಸಿ ಇನ್ನೇನು ವಿಮಾನಕ್ಕೆ ಹೋಗಬೇಕು ಎನ್ನುವಾಗ ದಾಳಿ ಆರಂಭವಾಗಿದೆ. ಇದೀಗ ಹೊರಕ್ಕೆ ಬರಲಾರದೆ ದಂಪತಿ ದುಬೈನಲ್ಲಿ ಸಿಲುಕಿದ್ದಾರೆ.

ಎಷ್ಟೊತ್ತಿಗೆ ನಮ್ಮೂರಿಗೆ ಬರುತ್ತೀವೋ ಎಂದು ಕಾದು ಕಣ್ಣೀರಿಟ್ಟಿದ್ದಾರೆ. ತುಂಬಾ ಭಯ ಆಗ್ತಿದೆ. ಒಂದು ದಿನ ಇಡೀ ಏರ್‌ಪೋರ್ಟ್‌ನಲ್ಲಿ ಕಳೆದಿದ್ದೆವು. ಅದಾದ ನಂತರ ಏರ್‌ಪೋರ್ಟ್‌ನಿಂದ ಹೊಟೇಲ್‌ಗೆ ಶಿಫ್ಟ್‌ ಮಾಡಿದ್ದಾರೆ. ದಯವಿಟ್ಟು ನಮ್ಮನ್ನು ವಾಪಾಸ್‌ ಕರೆಸಿಕೊಳ್ಳಿ ಎಂದು ಸರ್ಕಾರಕ್ಕೆ ದಂಪತಿ ಮನವಿ ಮಾಡಿದೆ.

Must Read