March 2, 2026
Monday, March 2, 2026
spot_img

ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌: ಬೇಸತ್ತು ಮಾಜಿ ಪ್ರಿಯಕರನಿಗೆ ಏನ್ ಮಾಡಿದ್ಲು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಖಾಸಗಿ ವಿಡಿಯೋಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮಾಜಿ ಪ್ರಿಯಕರನನ್ನು ವಿವಾಹಿತ ಮಹಿಳೆ ಕೊಲೆಗೈದಿರುವ ಘಟನೆ ನಡೆದಿದೆ. ಮಹಿಳೆ ತನ್ನ ಸಹೋದರ ಮತ್ತು ಅತ್ತಿಗೆಯ ಸಹಾಯದಿಂದ ಹತ್ಯೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಮೃತ ವ್ಯಕ್ತಿ ಅಜಮ್‌ಗಢ ಮೂಲದ ಪಂಕಜ್ ಗುಪ್ತಾ ಎಂದು ತಿಳಿದು ಬಂದಿದೆ. ಪಕ್ಕದ ಹಳ್ಳಿಯ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಆತ, ಆಕೆ ಸಂಬಂಧ ಮುರಿಯಲು ಮುಂದಾದಾಗ ಅಶ್ಲೀಲ ವಿಡಿಯೋಗಳನ್ನು ಬಳಸಿಕೊಂಡು ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಕಿರುಕುಳದಿಂದ ಬೇಸತ್ತ ಮಹಿಳೆ ಈ ವಿಷಯವನ್ನು ತನ್ನ ಕುಟುಂಬದವರಿಗೆ ತಿಳಿಸಿದ್ದಳು.

ಇದನ್ನೂ ಓದಿ:

ಫೆಬ್ರವರಿ 5ರಂದು ನಡೆದ ವಿವಾಹ ಸಮಾರಂಭದ ವೇಳೆ ಹತ್ಯೆಯ ಸಂಚು ರೂಪಿಸಲಾಗಿದ್ದು, ಫೆಬ್ರವರಿ 7ರಂದು ನೆಪವಿಟ್ಟು ಪಂಕಜ್ನನ್ನು ಗ್ರಾಮಕ್ಕೆ ಕರೆಯಿಸಿ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಗುರುತು ಪತ್ತೆಯಾಗದಂತೆ ಮುಖಕ್ಕೆ ಆಸಿಡ್ ಸುರಿದು ದೇಹವನ್ನು ಎಸೆಯಲಾಗಿದೆ.

ಫೆಬ್ರವರಿ 10ರಂದು ಮುಖ ವಿರೂಪಗೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ತನಿಖೆಯಿಂದ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ಸೇರಿ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇತರ ಶಂಕಿತರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !