March 2, 2026
Monday, March 2, 2026
spot_img

ಧರ್ಮಸ್ಥಳ, ಮಲೆಮಹದೇಶ್ವರ, ಮಂತ್ರಾಲಯಕ್ಕೆ ಹೋಗುವವರು ಒಮ್ಮೆ ಗಮನಿಸಿ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಳೆ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದ್ದು, ರಾಜ್ಯದ ಪ್ರಮುಖ ದೇಗುಲಗಳಲ್ಲಿ ದೇವರ ದರುಶನದ ಸಮಯದಲ್ಲಿ ಬದಲಾವಣೆ ಆಗಿದೆ. ಮಂತ್ರಾಲಯ, ಮಲೆಮಹದೇಶ್ವರ, ಧರ್ಮಸ್ಥಳಕ್ಕೆ ಹೋಗುವ ಭಕ್ತರು ಒಮ್ಮೆ ಸಮಯ ಪರಿಶೀಲಿಸಿಕೊಂಡು ಹೋಗುವುದು ಉತ್ತಮವಾಗಿದೆ.

ವಿಶ್ವವಿಖ್ಯಾತ ಬೇಲೂರು ಚನ್ನಕೇಶವಸ್ವಾಮಿ ದೇಗುಲದ ಗರ್ಭಗುಡಿ ನಾಲೆ ಬಂದ್‌ ಆಗಿರಲಿದೆ. ಬೆಳಗ್ಗೆ ವಿಶೇಷ ಪೂಜೆ ಮುಗಿಸಿ ದೇಗುಲದ ಬಾಗಿಲು ಬಂದ್‌ ಮಾಡಲಾಗುತ್ತದೆ.

ಇನ್ನು ಧರ್ಮಸ್ಥಳ ದೇಗುಲದ ಸಮಯವೂ ಬದಲಾಗಲಿದೆ. ನಾಳೆ ಮಧ್ಯಾಹ್ನ 1:30 ಗಂಟೆಗೆ ದೇವಸ್ಥಾನದ ಬಾಗಿಲನ್ನು ಹಾಕಲಾಗುವುದು. ಬೆಳಗಿನ ಪೂಜೆಗಳೆಲ್ಲವೂ 1:30ರ ಒಳಗಾಗಿ ಮುಕ್ತಾಯಗೊಳ್ಳಲಿವೆ. ಮಧ್ಯಾಹ್ನ ದೇವಸ್ಥಾನ ಬಂದ್ ಆದ ನಂತರವೂ, ಅತಿಥಿ ಅಭ್ಯಾಗತರಿಗಾಗಿ ಮಧ್ಯಾಹ್ನ 2:00 ಗಂಟೆಯವರೆಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ. ಗ್ರಹಣ ಮುಕ್ತಾಯದ ನಂತರ, ಅಂದರೆ ಸಂಜೆ 7:00 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಗರ್ಭಗುಡಿಯ ಶುದ್ಧೀಕರಣ ಮತ್ತು ಅಭಿಷೇಕದ ನಂತರ, ರಾತ್ರಿ 7:30ರ ನಂತರ ಭಕ್ತರಿಗೆ ದೇವರ ದರುಶನಕ್ಕೆ ಮುಕ್ತ ಅವಕಾಶವಿರುತ್ತದೆ.

ಇನ್ನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೂಜಾ ವಿಧಾನದಲ್ಲಿ ಬದಲಾವಣೆ ಆಗಿದೆ, ಆದರೆ ದರುಶನದ ಸಮಯದಲ್ಲಿ ಬದಲಾವಣೆ ಇಲ್ಲ. ಗ್ರಹಣದ ಅವಧಿಯಲ್ಲಿ ಶ್ರೀ ಮಠದಲ್ಲಿ ಯಾವುದೇ ವಿಶೇಷ ಪೂಜೆಗಳು, ಹರಕೆ ಸೇವೆಗಳು ಅಥವಾ ಪರ್ವಕಾಲದ ವಿಶೇಷ ಕಾರ್ಯಕ್ರಮಗಳು ಇರುವುದಿಲ್ಲ.ಹಣದ ಪ್ರಯುಕ್ತ ರಾಯರ ಮೂಲ ಬೃಂದಾವನಕ್ಕೆ ಯಾವುದೇ ವಿಶೇಷ ಅಲಂಕಾರಗಳನ್ನು ಮಾಡಲಾಗುವುದಿಲ್ಲ. ಕೇವಲ ಜಲಾಭಿಷೇಕ ಮಾತ್ರ ನೆರವೇರಿಸಲಾಗುತ್ತದೆ. ಪ್ರಸಾದದ ವ್ಯವಸ್ಥೆಯೂ ಇರುವುದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !