September 27, 2026
Sunday, September 27, 2026
spot_img

ದೂರದ ದೇಶಗಳಿಗೆ ಹೋಗಿ ಕೆಲಸ ಮಾಡೋ ಬದಲು ನಮ್ಮಲ್ಲೇ ಕೃಷಿ ಮಾಡ್ರೀ: ಎಚ್‌ಡಿಸಿ ಸಲಹೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉದ್ಯೋಗ ಅರಸಿ ಅಲ್ಲಿ ಇಲ್ಲಿ ಹೋಗಿ ಆಮೇಲೆ ಏನಾದ್ರೂ ಸಮಸ್ಯೆ ಅನುಭವಿಸುವ ಬದಲು ನಮ್ಮ ದೇಶದಲ್ಲೇ ಇದ್ದುಕೊಂಡು ಕೃಷಿ ಮಾಡಬಹುದಲ್ವಾ? ಓದಿದವರು ಕೃಷಿ ಮಾಡಬಾರದು ಅಂತೇನಿದೆ? ಕೃಷಿ ಬಗ್ಗೆ ಓದ್ಕೊಂಡು ತಿಳ್ಕೊಂಡು ಕೆಲಸ ಮಾಡಿ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

ಯುವಕರಿಗೆ ನಮ್ಮ ಸರ್ಕಾರದಲ್ಲಿ ಯಾವೆಲ್ಲಾ ಕಾರ್ಯಕ್ರಮಗಳಿವೆ, ಯಾವೆಲ್ಲ ಲಾಭ ಪಡೆಯಬಹುದು ಅನ್ನೋ ಮಾಹಿತಿ ಇರಬೇಕು. ಕೆಲಸ ಸಿಗದೇ ಹೋಯ್ತು ಅಂದಪಕ್ಷ ಬೇರೆ ದೇಶಕ್ಕೆ ಹೋಗದೇ ನಮ್ಮ ದೇಶದಲ್ಲೇ ಕೃಷಿ ಮಾಡಿಕೊಂಡು ಇರಬೇಕು ಎಂದಿದ್ದಾರೆ.

ಸ್ಥಳೀಯ ಸ್ಥಳಗಳಲ್ಲಿ ಕೃಷಿಯನ್ನು ಕೈಗೆತ್ತಿಕೊಳ್ಳುವಂತೆ ಯುವಕರಿಗೆ ಪ್ರೇರೇಪಣೆ ಸಿಗಬೇಕು. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಾವು ಲಾಭ ಗಳಿಸಬಹುದು. ಇದು ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದರು.

Must Read