ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ವಾಯುನೆಲೆಯನ್ನು ಕ್ಷಿಪಣಿ ಹಾಗೂ ಡ್ರೋನ್‌ಗಳ ಮೂಲಕ ಗುರಿಯಾಗಿಸಿ ದಾಳಿ ನಡೆಸಿದ್ದೇವೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೊಂಡಿದೆ. ಆದರೆ ಈ ದಾಳಿಯ ಕುರಿತು ಅಮೆರಿಕದಿಂದ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ.
ಇರಾನ್ ಹೇಳಿಕೆ ಏನು?
ಐಆರ್‌ಜಿಸಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜೋರ್ಡಾನ್‌ನ ಅಲ್-ಅಜ್ರಾಕ್ ವಾಯುನೆಲೆಯನ್ನು ಗುರಿಯಾಗಿಸಿ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಅಮೆರಿಕದ ಕೆಲವು ಯುದ್ಧ ವಿಮಾನಗಳು ಮತ್ತು ಇಂಧನ ಮರುಪೂರಣ ವಿಮಾನಗಳಿಗೆ ಹಾನಿಯಾಗಿದೆ ಎಂದು ಇರಾನ್ ಹೇಳಿದೆ.
ಇದನ್ನೂ ಓದಿ:
ಸಂಘರ್ಷದ ತೀವ್ರತೆ ಹೆಚ್ಚಳ
ಇತ್ತೀಚೆಗೆ ಇರಾನ್‌ನಲ್ಲಿನ ಕೆಲವು ಪ್ರದೇಶಗಳ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಇರಾನ್ ತಿಳಿಸಿದೆ. ಇದೇ ವೇಳೆ, ಪ್ರಾದೇಶಿಕ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಮೇಲೆ ಜಾಗತಿಕ ಸಮುದಾಯ ಕಣ್ಣಿಟ್ಟಿದೆ. ದಾಳಿಯಿಂದಾದ ಹಾನಿಯ ಪ್ರಮಾಣ ಅಥವಾ ಇರಾನ್‌ನ ಹೇಳಿಕೆ ಕುರಿತು ಅಮೆರಿಕ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.



