ಹೊಸದಿಗಂತ ಮಂಡ್ಯ :
ಜಮೀನನಲ್ಲಿ ಹೈನುಗಾರಿಕ ಮಾಡುವ ಸಲುವಾಗಿ ಮಾಡಿದ ಸಾಲವನ್ನು ತೀರಿಸಲು ಆಗದೆ ಮನನೊಂದು ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಳವಳ್ಳಿ ತಾಲೂಕು ಹಲಗೂರು ಸಮೀಪದ ನಿಟ್ಟೂರು ಕೋಡಿಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ನಾಗರತ್ನ(40) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಮಹಿಳೆ. ಮೃತರ ಪತಿ ಲೋಕೇಶ್ ಜೊತೆ ವಾಸವಿದ್ದು ಜಮೀನಿನಲ್ಲಿ ಹೈನುಗೈಗಾರಿಕೆ ಮಾಡುವ ಸಲುವಾಗಿ 1.25 ಲಕ್ಷ ರೂಪಾಯಿ ಕರ್ನಾಟಕ ಗ್ರಾಮೀಣಾ ಬ್ಯಾಂಕ್ ನಲ್ಲಿ ಸಾಲ ಮಡಿದ್ದು ಹಾಗೂ ಖಾಸಗಿಯಾಗಿ 6 ಲಕ್ಷಕ್ಕ ಹೆಚ್ಚು ರೂಪಾಯಿಗಳನ್ನ ಸಾಲ ಮಾಡಿದ್ದು ಸಾಲ ತೀರಿಸುವ ಬಗ್ಗೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತಿ ಲೋಕೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.