ಹೊಸ ದಿಗಂತ ವರದಿ, ಯಲ್ಲಾಪುರ :
ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಜೋಡುಕೆರೆ ಬಳಿ ರಕ್ಷಿಸಿದ ಘಟನೆ ನಡೆದಿದೆ.
ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ 19 ಜಾನುವಾರುಗಳನ್ನು ರಕ್ಷಿಸಿ, ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಶಕ್ಕೆ ಪಡೆದ ಜಾನುವಾರುಗಳ ಮೌಲ್ಯ 4,85000 ರೂ ಎಂದು ಹಾಗೂ ಲಾರಿಯ ಮೌಲ್ಯ 6 ಲಕ್ಷ ರೂ ಎಂದು ಅಂದಾಜಿಸಲಾಗಿದೆ.
ಸೋಮವಾರ ಮಧ್ಯರಾತ್ರಿಯ ಸಮಯದಲ್ಲಿ ಆರೋಪಿಗಳಾದ ಲಾರಿ ಚಾಲಕ ಮೈಸೂರಿನ ಮಹಮ್ಮದ್ ರಫಿ ಜಾಫರ್ ಪಾಷಾ ಹಾಗೂ ಕ್ಲೀನರ್ ಬೆಲ್ಲದಬಾಗೇವಾಡಿಯ ದ್ಯಾನೇಶ ಎಂಬುವವರು ಪರವಾನಗಿ ಇಲ್ಲದೇ ಕಲಘಟಗಿ ಕಡೆಯಿಂದ ಯಲ್ಲಾಪುರ ಮಾರ್ಗವಾಗಿ ಲಾರಿಯಲ್ಲಿ 12 ಹೋರಿಗಳು, 4 ಕೋಣಗಳು, 3 ಎಮ್ಮೆಗಳು ಸೇರಿದಂತೆ ಒಟ್ಟೂ 19 ಜಾನುವಾರುಗಳನ್ನು ವಧೆ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಕೇರಳ ರಾಜ್ಯಕ್ಕೆ ಸಾಗಿಸುತ್ತಿದ್ದರು. ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ



