April 29, 2026
Wednesday, April 29, 2026
spot_img

VIRAL | ನಂಜನಗೂಡು ದೇವಸ್ಥಾನದ ದಾಸೋಹ ಭವನದ ಬಳಿ ಮಾಂಸಾಹಾರ ಸೇವನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದ ದಾಸೋಹ ಭವನದ ಬಳಿ ಮಾಂಸಾಹಾರ ಸೇವನೆ ಮಾಡಿದ ಘಟನೆ ನಡೆದಿದೆ.

ಹೂವಿನ ವ್ಯಾಪಾರ ಮಾಡುವ ಪ್ರದೀಪ್‌ ಎಂಬಾತ ಮೆಟ್ಟಿಲುಗಳ ಮೇಲೆ ಕುಳಿತುಕೊಂಡು ತನ್ನ ಬಾಕ್ಸ್‌ನಲ್ಲಿದ್ದ ಮಾಂಸಾಹಾರವನ್ನು ತಿಂದಿದ್ದಾರೆ. ದೂರದಿಂದಲೇ ಗಮನಿಸಿದ ಭದ್ರತಾ ಸಿಬ್ಬಂದಿ ಪ್ರದೀಪ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದೇವಸ್ಥಾನದ ಬಾಗಿಲ ಬಳಿ ಕುಳಿತು ಮಾಂಸಾಹಾರ ಸೇವನೆ ಮಾಡುವುದು ತಪ್ಪು ಎಂದು ಗೊತ್ತಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಈ ವಿಷಯದ ಬಗ್ಗೆ ಮಾತುಕತೆ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !