October 10, 2026
Saturday, October 10, 2026
spot_img

CINE | ಮಾರ್ಚ್‌ನಲ್ಲಿ ಟಾಕ್ಸಿಕ್‌ ರಿಲೀಸ್‌ ಆಗ್ತಿಲ್ಲ, ಡೇಟ್‌ ಪೋಸ್ಟ್‌ಪೋನ್‌ ಆಗೋಕಿದೆ ಸ್ಟ್ರಾಂಗ್‌ ರೀಸನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಶ್ವದಲ್ಲೇ ಸದ್ದು ಮಾಡ್ತಿರೋ ಟಾಕ್ಸಿಕ್‌ ಸಿನಿಮಾ ಫ್ಯಾನ್ಸ್‌ಗೆ ಸಣ್ಣ ಮಟ್ಟದ ನಿರಾಸೆ ಆಗೋದು ಖಂಡಿತ. ಯಾಕಂದ್ರೆ ಇದೇ ಮಾರ್ಚ್‌ ೧೯ಕ್ಕೆ ರಿಲೀಸ್‌ ಆಗಬೇಕಿದ್ದ ಟಾಕ್ಸಿಕ್‌ ಸಿನಿಮಾ ರಿಲೀಸ್‌ ಡೇಟ್ ಪೋಸ್ಟ್‌ಪೋನ್‌ ಆಗಿದೆ.

ಇನ್ನೇನು ಕೆಲವೇ ದಿನದಲ್ಲಿ ಸಿನಿಮಾ ರಿಲೀಸ್‌ ಆಗತ್ತೆ ಎಂದು ಕಾದು ಕುಳಿತಿದ್ದ ಫ್ಯಾನ್ಸ್‌ಗೆ ಪೋಸ್ಟ್‌ಪೋನ್‌ ನ್ಯೂಸ್‌ನಿಂದ ಶಾಕ್‌ ಆಗಿದೆ. ಮಾರ್ಚ್‌ 19 ರಂದು ರಿಲೀಸ್‌ ಆಗಬೇಕಿದ್ದ ಸಿನಿಮಾ ಜೂನ್‌ 4ರಂದು ರಿಲೀಸ್‌ ಆಗಲಿದೆ.

ಕಾರಣ ಏನು? ಟೀಂ ಏನು ಹೇಳ್ತಿದೆ?

ನೀವೆಲ್ಲ ನಮ್ಮ ಸಿನಿಮಾ ನೋಡೋದಕ್ಕೆ ಕಾತರದಿಂದ ಕಾಯ್ತಾ ಇದ್ರಿ ಅಂತ ಗೊತ್ತಿದೆ. ಈ ಸಿನಿಮಾ ಮುಖ್ಯವಾಗಿ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ರಿಲೀಸ್‌ ಆಗ್ತಿದೆ. ನಮ್ಮ ನೆಲದ ಸಿನಿಮಾ ಇಡೀ ಜಗತ್ತನ್ನೇ ಮುಟ್ಟಬೇಕು ಅನ್ನೋ ಉದ್ದೇಶದಿಂದ ಈ ಫಿಲಂ ನಿರ್ಮಾಣ ಮಾಡಲಾಗಿದೆ. ಇದೀಗ ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಸಿನಿಮಾ ರಿಲೀಸ್‌ ಮಾಡಿದರೆ ನಾವು ನಮ್ಮಗುರಿಯನ್ನು ಮುಟ್ಟೋಕೆ ಆಗೋದಿಲ್ಲ. ಜಗತ್ತಿನ ಎಲ್ಲರೂ ನಮ್ಮ ಸಿನಿಮಾ ನೋಡಬೇಕು. ಇದೇ ಕಾರಣಕ್ಕೆ ಸಾಕಷ್ಟು ಯೋಚನೆ ಮಾಡಿ ರಿಲೀಸ್‌ ಡೇಟ್‌ ಪೋಸ್ಟ್‌ಪೋನ್‌ ಮಾಡಿದ್ದೀವಿ.ಎ ಲ್ಲರೂ ಸಹಕರಿಸಿ ಎಂದಿದ್ದಾರೆ.

Must Read