March 4, 2026
Wednesday, March 4, 2026
spot_img

ಎಷ್ಟು ಸಲ ಹೇಳಿದ್ರೂ ಅರ್ಥವಾಗೋದಿಲ್ವಾ? ಹಸಿ ಕಸ- ಒಣ ಕಸ ಬೇರ್ಪಡಿಸಿ!

ಕಸ ಮನೆಯಲ್ಲೇ ಇಟ್ಟುಕೊಂಡ್ರೆ ಕೊಳಕು, ಹೊರಗೆ ಹಾಕಿದ್ರೆ ಗಲೀಜು+ ದಂಡ, ಕಸದ ಬುಟ್ಟಿ ಮನೆಯ ಹತ್ತಿರ ಇಲ್ಲ! ಕಸ ಮಿಸ್‌ ಆಗಿ ಮಿಕ್ಸ್‌ ಆದ್ರೂ ದಂಡ ಫಿಕ್ಸ್‌!

ಹೌದು, ಹಸಿ ಕಸ ಹಾಗೂ ಒಣಕಸವನ್ನು ಮಿಕ್ಸ್‌ ಮಾಡಿ ಪೌರಕಾರ್ಮಿಕರ ಗಾಡಿಗೆ ಹಾಕಿದ್ರೂ ದಂಡ ತೆರಬೇಕಾಗುತ್ತದೆ. ಜತೆಗೆ ಅದೇ ಕಸ ನಿಮ್ಮ ಮನೆಯ ಮುಂದೆ ಬಂದು ಬೀಳುತ್ತದೆ.

ನಗರದಲ್ಲಿ ದಿನಕ್ಕೆ ಸುಮಾರು 5,500 ಮೆಟ್ರಿಕ್ ಟನ್ ಕಸ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಕೇವಲ 2,300 ಟನ್ ಮಾತ್ರ ವಿಂಗಡಿತ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಹೋಗುತ್ತಿದ್ದು, ಉಳಿದ ಕಸ ಬೆಳ್ಳಹಳ್ಳಿ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ.

ಮೇ ತಿಂಗಳೊಳಗೆ ಮತ್ತಷ್ಟು 1,500 ಮೆಟ್ರಿಕ್ ಟನ್ ವಿಂಗಡಿತ ತ್ಯಾಜ್ಯವನ್ನು ಮರುಬಳಕೆಗಾಗಿ ಹೆಚ್ಚಿಸಲು ಉದ್ದೇಶಿಸಿದ್ದೇವೆ. ಈ ಸಂಬಂಧ ಗುತ್ತಿಗೆದಾರರು, ಹಿರಿಯ ಇಂಜಿನಿಯರ್‌ಗಳು ಮತ್ತು ಮಾರ್ಷಲ್‌ಗಳೊಂದಿಗೆ ಸಭೆ ನಡೆಸಲಾಗಿದೆ. ಮಿಶ್ರ ಕಸ ಸಂಗ್ರಹಿಸಿ ಕಳುಹಿಸುವ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಿಕ್ಸ್‌ ಕಸವನ್ನು ತೆಗೆದುಕೊಳ್ಳಬೇಡಿ ಎಂದು ಈಗಾಗಲೇ ಪೌರಕಾರ್ಮಿಕರಿಗೆ ಸೂಚನೆ ನೀಡಲಾಗಿದೆ. ಆದರೆ ಕಪ್ಪು ಕವರ್‌ಗಳಲ್ಲಿ, ಕಾಣದಂತೆಯೂ ಹಸಿ ಕಸ ಇಡುತ್ತಾರೆ. ಇದು ನಿಲ್ಲಬೇಕಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !