ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ಬೊಜ್ಜು ದಿನದ ಅಂಗವಾಗಿ ಮಂಗಳೂರಿನ ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಆಸ್ಪತ್ರೆಯು ಸಮಗ್ರ ಮತ್ತು ವೈದ್ಯರ ನೇತೃತ್ವದ ಜೀವನಶೈಲಿ ಕೇಂದ್ರಿತ ಕ್ಲಿನಿಕ್ KLICK- – KMC Lifestyle & Integrated Care KLICK ನ್ನು ಮಾರ್ಚ್ 4 ರಂದು ಆರಂಭಿಸಿದೆ. ಈ ಉಪಕ್ರಮವು ಹೆಚ್ಚುತ್ತಿರುವ ತೂಕ ಏರಿಕೆ ಸಮಸ್ಯೆ ಮತ್ತು ಚಯಾಪಚಯ ಸಮಸ್ಯೆಯ ಕಡೆ ಗಮನ ಹರಿಸಬೇಕಾದ ಅನಿವಾರ್ಯತೆಯನ್ನು ಎತ್ತಿ ಹಿಡಿದಿದೆ.

ಹಿರಿಯ ವೈದ್ಯಕೀಯ ತಜ್ಞ ಡಾ.ಬಸವಪ್ರಭು ಅಚಪ್ಪ- ಫಿಸಿಶಿಯನ್ , ಡಾ. ವಿದ್ಯಾ ಭಟ್- ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಬ್ಯಾರಿಯಾಟ್ರಿಕ್ ತಜ್ಞೆ, ಶ್ರೀಮತಿ ಅರುಣಾ ಮಲ್ಯ- ಹಿರಿಯ ಆಹಾರ ತಜ್ಞೆ ಮತ್ತು ಡಾ. ರೇವತಿ ಅಮೀನ್- ಕನ್ಸಲ್ಟೆಂಟ್ ಫಿಸಿಯೋಥೆರಫಿಸ್ಟ್ ಮುಂತಾದವರ ಸಮ್ಮುಖದಲ್ಲಿ ಪತ್ರಿಕಾಗೋಷ್ಟಿ ನಡೆಯಿತು. ವೈದ್ಯಕೀಯ ಮೇಲ್ವಿಚಾರಣೆ ಒಳಗೊಂಡ KLICK ಪ್ಯಾಕೇಜ್‌ನ್ನು ಪರಿಚಯಿಸಲಾಯಿತು. ಸಣ್ಣ ವಯಸ್ಸಿನಲ್ಲೇ ಡಯಾಬಿಟಿಸ್, ಹೈಪರ್‍ಟೆನ್ಷನ್ , ಹೃದಯ ರೋಗ ಮತ್ತು ಇತರೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಮುಖ್ಯ ಕಾರಣ ಬೊಜ್ಜು. ಈ ಕ್ಲಿನಿಕ್ ಮೂರರಿಂದ – ಆರು ತಿಂಗಳೊಳಗೆ ಗಮನಾರ್ಹ ಬದಲಾವಣೆಯನ್ನು ನೀಡುವ ಭರವಸೆ ನೀಡುತ್ತದೆ.
ವೈದ್ಯಕೀಯ ಸೇವೆಯನ್ನು ಇನ್ನಷ್ಟು ಬಲಗೊಳಿಸಲು ಎಂಡೊಕ್ರಿನೊಲಾಜಿಸ್ಟ್ ಮತ್ತು ಹಾರ್ಮೋನ್ ಡಿಸಾರ್ಡರ್ ತಜ್ಞ ಡಾ. ಶ್ರೀನಾಥ್ ಪಿ ಶೆಟ್ಟಿ ಹಾರ್ಮೋನ್ ಆಧಾರಿತ ತೂಕ ನಿರ್ವಹಣೆಯ ಕುರಿತು ಸಲಹೆಗಳನ್ನು ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಫಿಸಿಶಿಯನ್ ಡಾ.ಬಸವಪ್ರಭು ಅಚಪ್ಪ, “ ಬೊಜ್ಜು ಕೇವಲ ಸೌಂದರ್ಯದ ಸಮಸ್ಯೆಯಲ್ಲ, ಇದೊಂದು ಸಣ್ಣ ವಯಸ್ಸಿನವರಿಂದ ಇಳಿವಯಸ್ಸಿನವರ ಮೇಲೆ ಪರಿಣಾಮ ಬೀರುವ ಸಂಕೀರ್ಣ ಚಯಾಪಚಯ ಸಮಸ್ಯೆಯಾಗಿದೆ. KLICK ನಲ್ಲಿ ನಾವು ವೈದ್ಯಕೀಯ ಹಸ್ತಕ್ಷೇಪ ಮತ್ತು ಜೀವನಶೈಲಿಯ ನಡುವೆ ಸೇತುವೆಯಾಗಿ ಸಮಗ್ರ ಚೌಕಟ್ಟಿನ ಪರಿಹಾರವನ್ನುಒದಗಿಸುತ್ತೇವೆ. ವ್ಯಕ್ತಿ ಕೇಂದ್ರಿತ ನ್ಯೂಟ್ರೀಶನ್ ಯೋಜನೆ, ಬಲವರ್ಧನೆ ತರಬೇತಿ ಮತ್ತು ಔಷದೋಪಚಾರಗಳನ್ನು ಒಗ್ಗೂಡಿಸುವ ಮೂಲಕ ನಾವು ತೂಕ ನಿರ್ವಹಣೆ, , ಬ್ಲಡ್ ಶುಗರ್, ಕೊಲೆಸ್ಟ್ರಾಲ್ ಮಟ್ಟ ,ದಲ್ಲಿ ಮೂರರಿಂದ ಆರು ತಿಂಗಳ ಅವಧಿಯಲ್ಲಿ ಗಮನಾರ್ಹ ಬದಲಾವಣೆ ಕಂಡಿದ್ದೇವೆ.
ಹಿರಿಯ ಡಯಟೀಶಿಯನ್ ಶ್ರೀಮತಿ ಅರುಣಾ ಮಲ್ಯಾ ಮಾತನಾಡಿ “ ತೂಕ ನಿರ್ವಹಣೆ ಎಂದರೆ ನಿರ್ಬಂಧಿತ ಆಹಾರ ಪದ್ದತಿಯಲ್ಲ, ಬದಲಾಗಿ ಇದೊಂದು , ವ್ಯಕ್ತಿ ಕೇಂದ್ರಿತವಾಗಿ ರಚಿಸಲಾದ ಆಹಾರ ಪದ್ದತಿ. ನಮ್ಮ ಸಮಗ್ರ ಡಯಟ್ ಯೋಜನೆಯು ಬ್ಲಡ್ ಶುಗರ್, ಕೊಲೆಸ್ಟ್ರಾಲ್ ಮಟ್ಟ, ಮತ್ತು ಸಮಗ್ರ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆ ತರುವಲ್ಲಿ ಅಗತ್ಯವಾಗಿರುವ ಮಾಕ್ರೊ ಮತ್ತು ಮೈಕ್ರೋ ನ್ಯೂಟ್ರಿಯೆಂಟ್ಸ್ ಮತ್ತು ವೈಯಕ್ತಿಕ ಚಯಾಪಚಯ ಕ್ರಿಯೆಯ ಅಗತ್ಯವನ್ನು ಕೇಂದ್ರೀಕರಿಸಿ ರಚಿಸಲಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸರ್ಜಿಕಲ್ ಗ್ಯಾಸ್ಟ್ರೊಎಂಟಿರೊಲಾಜಿ ಮತ್ತು ಬ್ಯಾರಿಯಾಟ್ರಿಕ್ ತಜ್ಞೆ ಡಾ. ವಿದ್ಯಾ ಭಟ್ “ ಹಲವರಿಗೆ ಬೊಜ್ಜು ಎನ್ನುವುದು ಆತ್ಮವಿಶ್ವಾಸ ಮೀರಿದ ದೀರ್ಘ ಕಾಲದ ಆರೋಗ್ಯ ಸ್ಥಿತಿ ಎನ್ನುವುದನ್ನು ಗುರುತಿಸಬೇಕು. KLICK ನಲ್ಲಿ ನಾವು ಜೀರ್ಣಾಂಗದ ಮೇಲೆ ಬೀರುವ ಬೊಜ್ಜಿನ ಶಾರೀರಿಕ ಪರಿಣಾಮದ ಮೇಲೆ ನಿಗಾವಹಿಸುವ ವೈದ್ಯಕೀಯ ಪರಿಸರವನ್ನು ನೀಡುತ್ತೇವೆ. ನಾವು ಮುಂದುವರೆದ ಚಿಕಿತ್ಸೆ ಅಗತ್ಯವಿರುವವರಿಗೆ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ಸೇವೆಯನ್ನೂ ನೀಡುತ್ತೇವೆ. ಜೀವನಶೈಲಿಯಲ್ಲಿ ಬದಲಾವಣೆ ಅಥವಾ ಜೀವನ ಬದಲಾಯಿಸುವ ಶಸ್ತ್ರಚಿಕಿತ್ಸೆ ಮೂಲಕ ಸುರಕ್ಷಿತವಾಗಿ, ಪರಿಣಾಮಕಾರಿಯಾಗಿ ತೂಕ ಇಳಿಸುವುದನ್ನು ಖಚಿತಪಡಿಸುವುದು ನಮ್ಮ ಗುರಿ” ಎಂದರು.
ಕನ್ಸಲ್ಟೆಂಟ್ ಫಿಸಿಯೋಥೆರಪಿಸ್ಟ್ ಡಾ. ರೇವತಿ ಅಮಿನ್ ಮಾತನಾಡಿ “ ರಚನಾತ್ಮಕ ತೂಕ ತರಬೇತಿಯು ಸ್ನಾಯು ರಚನೆ , ಚಯಾಪಚಯ ಕ್ರಿಯೆಲ್ಲಿ ಸುಧಾರಣೆ ಹಾಗೂ ಸಮಗ್ರ ಕ್ರಿಯಾತ್ಮಕ ಶಕ್ತಿಯನ್ನು ವೃದ್ದಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸ್ನಾಯು ಕೇಂದ್ರಿತ ವಿಧಾನವು ಸುಸ್ಥಿರ ತೂಕ ನಿರ್ವಹಣೆಯೊಂದಿಗೆ ದೀರ್ಘಕಾಲದ ಆರೋಗ್ಯವನ್ನೂ ವೃದ್ಧಿಸುವಲ್ಲಿ ನೆರವಾಗುತ್ತದೆ” ಎಂದರು.
ಉತ್ತಮ ಆರೋಗ್ಯ ನಿರ್ವಹಣೆಗಾಗಿ ವಿಶೇಷವಾಗಿ 5050ರೂನಲ್ಲಿ KLICK ತೂಕ ಇಳಿಕೆ ಪ್ಯಾಕೇಜ್‌ನ್ನು ಆರಂಭಿಸಲಾಗಿದೆ. ಈ ಯೋಜನೆ ಡಯಾಗ್ನೊಸ್ಟಿಕ್ ಪ್ಲ್ಯಾನ್, ಅಗತ್ಯ ರಕ್ತ ಪರೀಕ್ಷೆ , ವಿವಿಧ ವಿಭಾಗದ ತಜ್ಞರ ಸಮಾಲೋಚನೆಯನ್ನು ಒಳಗೊಂಡಿದೆ. ಈ ಪ್ಯಾಕೆಜ್ ಸುಸ್ಥಿರ, ವೈದ್ಯಕೀಯ ನಿಗಾ ಒಳಗೊಂಡಿರುವ ಯೋಗಕ್ಷೇಮ ಸೇವೆಯನ್ನು ಪಡೆಯುವಲ್ಲಿ ಆಸಕ್ತಿ ಹೊಂದಿರುವವರಿಗೆ ಮೊದಲ ಹೆಜ್ಜೆಯಾಗಿ ಸೇವೆ ಸಲ್ಲಿಸುತ್ತದೆ. ಈ ಪ್ಯಾಕೇಜ್‌ನ ಸೇವೆ ಪಡೆಯಲು 94482 54700 ಕರೆ ಮಾಡಿ.
KLICK ತೂಕ ಇಳಿಕೆ ಕ್ಲಿನಿಕ್ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಕಾರ್ಯನಿರ್ವಹಿಸಲಿದೆ.



