April 28, 2026
Tuesday, April 28, 2026
spot_img

ಪಂಜಾಬ್ ಗೆ ಪ್ರಭಸಿಮ್ರನ್, ಸ್ಟೋಯ್ನಿಸ್ ಬಲ: ರಾಜಸ್ಥಾನ್​ ಗೆಲುವಿಗೆ 223 ರನ್​ಗಳ ಟಾರ್ಗೆಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಭಸಿಮ್ರನ್ ಸಿಂಗ್, ಮಾರ್ಕಸ್ ಸ್ಟೋಯ್ನಿಸ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 222 ರನ್​ಗಳ ಬೃಹತ್ ಮೊತ್ತ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಪಂಜಾಬ್ ಗೆ ಪ್ರಿಯಾಂಶ್ ಆರ್ಯ 3ನೇ ಓವರ್​​ನಲ್ಲಿ ನಿರಾಸೆ ಮೂಡಿಸಿದ್ದು, 29 ರನ್ ಗೆ ಔಟ್ ಆದರು. ನಂತರ ಬಂದ ಕೂಪರ್ ಕೊನೊಲಿ ಪ್ರಭಸಿಮ್ರನ್ ಸಿಂಗ್ ಜೊತೆ ಸೇರಿ 59 ರನ್​ಗಳ ಜೊತೆಯಾಟ ನೀಡಿದರು. ಕೊನೊಲಿ 30 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಪ್ರಭಸಿಮ್ರನ್ 59 ರನ್​ ಗಳಿಸಿ ಔಟಾದರೆ, ನಾಯಕ ಶ್ರೇಯಸ್ ಅಯ್ಯರ್ 30 ರನ್​ಗಳಿಸಿ ನಿರಾಸೆ ಮೂಡಿಸಿದರು. ಬಳಿಕ ಬಂದ ಮಾರ್ಕಸ್ ಸ್ಟೋಯ್ನಿಸ್ ಸ್ಫೋಟಕ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 222ಕ್ಕೆ ಏರುವಂತೆ ಮಾಡಿದರು. ಕೇವಲ 22 ಎಸೆತಗಳನ್ನೆದುರಿಸಿ ಅಜೇಯ 62 ರನ್​ಗಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !