July 16, 2026
Thursday, July 16, 2026
spot_img

ಪಲ್ಯ, ಗ್ರೇವಿ & More 26 | ಸ್ವಲ್ಪ ಸ್ವಲ್ಪ ತರಕಾರಿ ಉಳ್ದಿದ್ರೆ ಅದ್ರಿಂದ ಮಿಕ್ಸ್ ವೆಜಿಟೇಬಲ್ ಪಲ್ಯ ರೆಡಿ ಮಾಡಿ

ಮನೆಯಲ್ಲಿ ಸ್ವಲ್ಪ ಸ್ವಲ್ಪ ತರಕಾರಿ ಉಳ್ದಿದ್ರೆ ಅದ್ರಿಂದ ಮಿಕ್ಸ್ ವೆಜಿಟೇಬಲ್ ಪಲ್ಯ ಮಾಡಿ. ವಿವಿಧ ತರಕಾರಿಗಳ ಪೌಷ್ಟಿಕಾಂಶ ಮತ್ತು ರುಚಿ ಒಂದೇ ಪದಾರ್ಥದಲ್ಲಿ ಸಿಗುತ್ತದೆ. ಚಪಾತಿ, ಪೂರಿ, ಅನ್ನ–ಸಾಂಬಾರ್ ಎಲ್ಲಕ್ಕೂ ಸೂಪರ್ ಕಾಂಬಿನೇಷನ್ ಆಗುತ್ತೆ. ತಿನ್ನೋದಕ್ಕೂ ರುಚಿ, ತರಕಾರಿನೂ ಖಾಲಿಯಾಗುತ್ತೆ.

ಬೇಕಾಗುವ ಪದಾರ್ಥಗಳು

ಕ್ಯಾರಟ್ – 1
ಬೀನ್ಸ್ – 8-10
ಆಲೂಗಡ್ಡೆ – 1
ಬಟಾಣಿ – ಅರ್ಧ ಕಪ್
ಕ್ಯಾಪ್ಸಿಕಂ – 1
ಈರುಳ್ಳಿ – 1
ಹಸಿಮೆಣಸು – 1-2
ಅರಿಶಿಣ – ಚಿಟಿಕೆ
ಮೆಣಸಿನ ಪುಡಿ – ಅರ್ಧ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಾಸಿವೆ, ಜೀರಿಗೆ – ಅರ್ಧ ಟೀ ಸ್ಪೂನ್
ಕರಿಬೇವು – ಕೆಲವು
ತುರಿದ ತೆಂಗಿನಕಾಯಿ – 2 ಟೇಬಲ್ ಸ್ಪೂನ್
ಎಣ್ಣೆ – 2 ಟೇಬಲ್ ಸ್ಪೂನ್

ಮಾಡುವ ವಿಧಾನ

ಮೊದಲು ಎಲ್ಲಾ ತರಕಾರಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ ಹಾಕಿ. ನಂತರ ಕರಿಬೇವು, ಹಸಿಮೆಣಸು ಮತ್ತು ಈರುಳ್ಳಿ ಹಾಕಿ ಸ್ವಲ್ಪ ಹುರಿಯಿರಿ.

ಈಗ ಕ್ಯಾರಟ್, ಬೀನ್ಸ್, ಆಲೂಗಡ್ಡೆ, ಬಟಾಣಿ ಸೇರಿಸಿ. ಅರಿಶಿಣ, ಉಪ್ಪು ಮತ್ತು ಮೆಣಸಿನ ಪುಡಿ ಹಾಕಿ ಮುಚ್ಚಿ ಬೇಯಿಸಿ. ಅಗತ್ಯವಿದ್ದರೆ ಸ್ವಲ್ಪ ನೀರು ಹಾಕಿ.

ತರಕಾರಿಗಳು ಮೃದುವಾದ ಬಳಿಕ ತುರಿದ ತೆಂಗಿನ ತುರಿ ಸೇರಿಸಿ ಒಮ್ಮೆ ಕಲಸಿ. ಬಿಸಿ ಬಿಸಿ ಮಿಕ್ಸ್ ವೆಜಿಟಬಲ್ ಪಲ್ಯ ಸವಿಯಲು ಸಿದ್ಧ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !