October 16, 2026
Friday, October 16, 2026
spot_img

ದಾಖಲೆ ಬರೆಯಲು ಸಜ್ಜಾದ ಸಿಎಂ ಸಿದ್ದರಾಮಯ್ಯ: ನಾಳೆ ಆಯವ್ಯಯ ಮಂಡನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ದಾಖಲೆಯೊಂದನ್ನು ಬರೆಯಲಿದ್ದಾರೆ.

ಹೌದು, 2026-27ನೇ ಸಾಲಿನ ಬಜೆಟ್‌ ನಾಳೆ ಮಂಡನೆಯಾಗಲಿದೆ. ಇದು ಸಿಎಂ ಸಿದ್ದರಾಮಯ್ಯರ 17ನೇ ಬಜೆಟ್ ಆಗಿರಲಿದೆ. ಈವರೆಗೂ ಯಾವ ಮುಖ್ಯಮಂತ್ರಿಯೂ 17 ಬಾರಿ ಬಜೆಟ್‌ ಮಂಡನೆ ಮಾಡಿಲ್ಲ.

ಈಗಾಗಲೇ ಬಜೆಟ್‌ ಮಂಡನೆಗೆ ಸಕಲ ಸಿದ್ಧತೆಗಳು ನಡೆದಿವೆ. ಜನಸಾಮಾನ್ಯರು ಈ ಬಾರಿಯ ಬಜೆಟ್‌ನಿಂದ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿಎಂ ಎಲ್ಲ ಇಲಾಖೆಗಳ ಜತೆ ಚರ್ಚೆ ನಡೆಸಿ ಬಜೆಟ್‌ ಅಂತಿಮಗೊಳಿಸಲಾಗಿದೆ.

ಈ ಬಾರಿಯ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡುವುದರ ಜೊತೆಗೆ, ರಾಜ್ಯದ ಆರ್ಥಿಕ ಹೊರೆಯನ್ನು ತಗ್ಗಿಸಲು ಯೋಜನೆಗಳಲ್ಲಿ ಬದಲಾವಣೆಗಳನ್ನು ತರಲಾಗುತ್ತದೆಯೇ ಎಂಬ ಕುತೂಹಲವಿದೆ. ಮೂಲಸೌಕರ್ಯ, ಶಿಕ್ಷಣ, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ.

Must Read