ಟಿ20 ವಿಶ್ವಕಪ್‌ನಲ್ಲಿ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೆ ದಾಪುಗಾಲಿಟ್ಟಿದ್ದ ಸೌತ್ ಆಫ್ರಿಕಾ ತಂಡಕ್ಕೆ ನಿರ್ಣಾಯಕ ಪಂದ್ಯದಲ್ಲಿ ಭಾರೀ ನಿರಾಶೆ ಎದುರಾಗಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ಎದುರು ಸೌತ್ ಆಫ್ರಿಕಾ 9 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ.
ಪಂದ್ಯದ ನಂತರ ಮಾತನಾಡಿದ ಸೌತ್ ಆಫ್ರಿಕಾ ತಂಡದ ಮುಖ್ಯ ಕೋಚ್ ಶುಕ್ರಿ ಕಾನ್ರಾಡ್, ಈ ಸೋಲನ್ನು ‘ಚೋಕ್’ ಎಂದು ಕರೆಯಲಾಗುವುದಿಲ್ಲ ಎಂದರು. ಪಂದ್ಯದಲ್ಲಿ ಗೆಲ್ಲುವ ಸಾಧ್ಯತೆ ತೋರಿಸಿದ್ದರೆ ಅದನ್ನು ಚೋಕ್ ಎಂದು ಹೇಳಬಹುದಿತ್ತು. ಆದರೆ ಈ ಪಂದ್ಯದಲ್ಲಿ ನಾವು ಸಂಪೂರ್ಣವಾಗಿ ಸೋತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:
ಅವರ ಮಾತಿನಲ್ಲಿ, ಇದು ಸರಳವಾಗಿ ಹೇಳುವುದಾದರೆ ತಂಡಕ್ಕೆ ಬಿದ್ದ ಗಟ್ಟಿಯಾದ ಪೆಟ್ಟು. ನಾವು ಅಷ್ಟೊಂದು ಹೀನಾಯವಾಗಿ ಸೋತಿದ್ದೇವೆ. ಉತ್ತಮ ಪ್ರದರ್ಶನದ ನಂತರವೂ ಸೆಮಿಫೈನಲ್‌ನಲ್ಲಿ ಸೋಲು ಕಂಡಿರುವುದು ಸೌತ್ ಆಫ್ರಿಕಾ ತಂಡ ಮತ್ತೊಮ್ಮೆ ನಿರಾಸೆ ಅನುಭವಿಸಿದೆ.



