ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಯುದ್ಧದ ಕಾರ್ಮೋಡದಿಂದ ಗಲ್ಫ್ ವಾಯುಪ್ರದೇಶದ ಮುಚ್ಚುವಿಕೆಯಾಗಿದ್ದು, ಇದರಿಂದ ಭಾರತದಲ್ಲಿ ಸಿಲುಕಿಕೊಂಡಿದ್ದ ಜಿಂಬಾಬ್ವೆಯ ಕ್ರಿಕೆಟಿಗರ ಒಂದು ಗುಂಪು, ತವರಿಗೆ ತೆರಳಿದೆ .
ಐಸಿಸಿ ವಿಶೇಷ ಪ್ರಯಾಣ ವ್ಯವಸ್ಥೆಗಳನ್ನು ಪುನರ್ರಚಿಸಿದ ನಂತರ ಜಿಂಬಾಬ್ವೆ ತಂಡವು ಮನೆಗೆ ತೆರಳಿತು. ಆದರೆ ವೆಸ್ಟ್ ಇಂಡೀಸ್ ತಂಡದ ಆಟಗಾರರು ಇನ್ನೂ ಕೆಲ ದಿನಗಳ ಕಾಲ ಭಾರತದಲ್ಲೇ ಉಳಿಯಬೇಕಿದೆ.
ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸಿದ ದಾಳಿಯ ನಂತರ ಗಲ್ಫ್ ಪ್ರದೇಶದಲ್ಲಿ ವಾಯುಪ್ರದೇಶ ಮುಚ್ಚಲ್ಪಟ್ಟ ಕಾರಣ ದೆಹಲಿಯಲ್ಲಿ ಸಿಲುಕಿಕೊಂಡಿತ್ತು.
ಇದೀಗ ಮೊದಲ ಬ್ಯಾಚ್ ಆಟಗಾರರು ಅಂತಿಮವಾಗಿ ಪರ್ಯಾಯ ವಿಮಾನಗಳಲ್ಲಿ ಮನೆಗೆ ತೆರಳಿದರು. ಈ ವಿಚಾರವನ್ನು ಜಿಂಬಾಬ್ವೆ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ತಿಳಿಸಿದೆ. “ಇತ್ತೀಚಿನ ವಿಮಾನ ಸಾರಿಗೆ ಅಡಚಣೆಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಪರ್ಯಾಯ ಪ್ರಯಾಣ ವ್ಯವಸ್ಥೆಗಳನ್ನು ನೀಡಿದ ಕಾರಣ, ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ರಲ್ಲಿ ಭಾಗವಹಿಸಿದ ಜಿಂಬಾಬ್ವೆ ಹಿರಿಯ ಪುರುಷರ ತಂಡವು ಭಾರತದಿಂದ ತವರಿಗೆ ತೆರಳುತ್ತಿದೆ ಎಂದು ಜಿಂಬಾಬ್ವೆ ಕ್ರಿಕೆಟ್ ದೃಢಪಡಿಸಿದೆ.
ತಂಡವು ಬ್ಯಾಚ್‌ಗಳಲ್ಲಿ ಹರಾರೆಗೆ ಹಿಂತಿರುಗಲಿದೆ. ಮೊದಲ ಗುಂಪಿನ ಆಟಗಾರರು ಬುಧವಾರ ಭಾರತದಿಂದ ಹೊರಟರು, ಆದರೆ ಅಂತಿಮ ಗುಂಪು ಶುಕ್ರವಾರ ಮಧ್ಯಾಹ್ನ ಹೊರಡಲಿದೆ ಎಂದು ಅದು ಹೇಳಿದೆ.



