April 24, 2026
Friday, April 24, 2026
spot_img

ಸೇನಾ ಮುಖಾಮುಖಿಯಿಂದ ಯಾವುದೇ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾವುದೇ ಸಮಸ್ಯೆಯನ್ನು ಸೇನಾ ಮುಖಾಮುಖಿಯ ಮೂಲಕ ಪರಿಹರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭಾರತ ಪ್ರವಾಸದಲ್ಲಿರುವ ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರೊಂದಿಗೆ ಹೈದರಾಬಾದ್ ಹೌಸ್ ನಲ್ಲಿ ಸುದೀರ್ಘ ಮಾತುಕತೆ ನಡೆಸಿದ ನಂತರ ಪ್ರಧಾನಿ ಮೋದಿ , ಇರಾನ್-ಇಸ್ರೇಲ್-ಯುಎಸ್ ಮತ್ತು ಉಕ್ರೇನ್-ರಷ್ಯಾ ಯುದ್ಧಗಳ ಮಧ್ಯೆ ಜಾಗತಿಕ ಶಾಂತಿಗೆ ಭಾರತದ ಬದ್ಧತೆಯನ್ನು ತಿಳಿಸಿದರು.

ಉಕ್ರೇನ್ ಆಗಿರಲಿ ಅಥವಾ ಪಶ್ಚಿಮ ಏಷ್ಯಾ ಆಗಿರಲಿ, ಸಂಘರ್ಷಗಳ ತ್ವರಿತ ಅಂತ್ಯ ಕಾಣಬೇಕು ಮತ್ತು ಶಾಂತಿಗಾಗಿ ಪ್ರತಿಯೊಂದು ಪ್ರಯತ್ನವನ್ನು ಬೆಂಬಲಿಸುವುದನ್ನು ನಾವು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.

ಭಾರತ ಮತ್ತು ಫಿನ್ಲ್ಯಾಂಡ್ ಎರಡೂ ರಾಷ್ಟ್ರಗಳು ಕಾನೂನು, ದ್ವಿಪಕ್ಷಿಯ ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ನಂಬುತ್ತವೆ. ಯಾವುದೇ ಸಮಸ್ಯೆಯನ್ನು ಮಿಲಿಟರಿ ಸಂಘರ್ಷದಿಂದ ಪರಿಹರಿಸಲು ಸಾಧ್ಯವಿಲ್ಲ ಎಂಬುದನ್ನು ನಾವು ಒಪ್ಪುತ್ತೇವೆಎಂದು ಅವರು ಹೇಳಿದರು.

AI ನಿಂದ 6G ಟೆಲಿಕಾಂ, ಶುದ್ಧ ಇಂಧನದಿಂದ ಕ್ವಾಂಟಮ್ ಕಂಪ್ಯೂಟಿಂಗ್‌ವರೆಗಿನ ಈ ಪಾಲುದಾರಿಕೆಯು ಅನೇಕ ಹೈಟೆಕ್ ಕ್ಷೇತ್ರಗಳಲ್ಲಿ ನಮ್ಮ ಸಹಕಾರಕ್ಕೆ ವೇಗ ಮತ್ತು ಶಕ್ತಿಯನ್ನು ನೀಡುತ್ತದೆ.ಭಾರತ ಮತ್ತು ಯುರೋಪಿಯನ್ ಯೂನಿಯನ್(ಇಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ.ಈ ಒಪ್ಪಂದವು ಭಾರತ ಮತ್ತು ಫಿನ್‌ಲ್ಯಾಂಡ್ ನಡುವಿನ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !