August 29, 2026
Saturday, August 29, 2026
spot_img

ಇರಾನ್‌ ಸರ್ವೋಚ್ಚ ನಾಯಕ ಖಮೇನಿಯ ನಿಧನಕ್ಕೆ ಭಾರತ ಸಂತಾಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ ನಿಧನಕ್ಕೆ ಭಾರತ ಸಂತಾಪ ಸೂಚಿಸಿದೆ.

ಇಸ್ಲಾಮಿಕ್ ಗಣರಾಜ್ಯದ 86 ವರ್ಷದ ಮಾಜಿ ಸರ್ವೋಚ್ಚ ನಾಯಕ ಖಮೇನಿ 1989ರಿಂದ ಇರಾನ್ ದೇಶವನ್ನು ಆಳುತ್ತಿದ್ದರು. ಶನಿವಾರ ಮುಂಜಾನೆ ಅಮೆರಿಕ ಮತ್ತು ಇಸ್ರೇಲ್ ಪ್ರಾರಂಭಿಸಿದ ಜಂಟಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿದ್ದಾರೆ.

ಖಮೇನಿಯ ನಿಧನಕ್ಕೆ ಭಾರತದ ಮೊದಲ ಪ್ರತಿಕ್ರಿಯೆಯ ಭಾಗವಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಇಂದು ದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಗೆ ಭೇಟಿ ನೀಡಿ,. ಅಲ್ಲಿ ಇರಿಸಲಾಗಿದ್ದ ಸಂತಾಪ ಸೂಚಕ ಪುಸ್ತಕದಲ್ಲಿ ಸಹಿ ಹಾಕುವ ಮೂಲಕ ದಿವಂಗತ ನಾಯಕನಿಗೆ ಗೌರವ ಸಲ್ಲಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !