ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ರಷ್ಯಾದಿಂದ ತೈಲ ಹೊತ್ತ ಮೂರು ಹಡಗುಗಳು ಭಾರತದತ್ತ ಹೊರಟಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.
ಈ ಮೂರು ಹಡಗುಗಳಲ್ಲಿ 21 ಲಕ್ಷಕ್ಕೂ ಅಧಿಕ ಬ್ಯಾರಲ್ ತೈಲ ಇದ್ದು, ಒಡುನೆ, ಮಟಾರಿ ಮತ್ತು ಇಂದ್ರಿ ಹಡಗುಗಳ ಮೂಲಕ ಭಾರತಕ್ಕೆ ಈ ತೈಲ ಸಿಗುತ್ತಿದೆ.ಒಡುನೆ, ಮಟಾರಿ ಮತ್ತು ಇಂದ್ರಿ ಹಡಗುಗಳ ಮೂಲಕ ಭಾರತಕ್ಕೆ ಈ ತೈಲ ಸಿಗುತ್ತಿದೆ. ಒಡುನೆ ಮತ್ತು ಇಂದ್ರಿ ಹಡಗುಗಳು ಸ್ಯೂಜ್ಮ್ಯಾಕ್ಸ್ ದರ್ಜೆಯ ಹಡುಗಗಳಾಗಿದ್ದು, ತಲಾ 7,30,000 ಬ್ಯಾರಲ್ಗಳನ್ನು ಸಾಗಿಸುತ್ತವೆ. ಮಟಾರಿ ಎಂಬುದು ಆಫ್ರಾಮ್ಯಾಕ್ಸ್ ದರ್ಜೆಯ ಹಡಗಾಗಿದ್ದು, ಇದು 7,00,000 ಬ್ಯಾರಲ್ ತೈಲ ಸಾಗಿಸುತ್ತದೆ.
ಇದರಲ್ಲಿ ಈಗಾಗಲೇ 7.3 ಲಕ್ಷ ಬ್ಯಾರಲ್ ತೈಲ ಹೊತ್ತ ಒಡುನೆ ಹಡಗು ಭಾರತದ ಪಾರದೀಪ್ ಬಂದರನ್ನು ತಲುಪಿದೆ. ಮಟಾರಿ ಟ್ಯಾಂಕರ್ ಗುಜರಾತ್ನ ವಾಡಿನರ್ ಬಂದರಿನತ್ತ ಬರುತ್ತಿದೆ. ಇನ್ನು, ಸಿಂಗಾಪುರದತ್ತ ಹೋಗುತ್ತಿದ್ದ ಇಂದ್ರಿ ಟ್ಯಾಂಕರ್ ಭಾರತದತ್ತ ತಿರುಗಿದೆ ಎಂದು ಹೇಳಲಾಗುತ್ತಿದೆ.
ರಷ್ಯಾ ಮೇಲೆ ಪಾಶ್ಚಿಮಾತ್ಯ ದೇಶಗಳು ನಿಷೇಧ ಹಾಕಿದ ಬಳಿಕ ರಷ್ಯಾದಿಂದ ಭಾರತ ಹಾಗೂ ಚೀನಾ ಕಡಿಮೆ ಬೆಲೆಗೆ ತೈಲ ಖರೀದಿ ಮಾಡುತ್ತಿವೆ. ಆದರೆ, ಅಮೆರಿಕದ ಒತ್ತಡದಿಂದ ತಿಂಗಳ ಹಿಂದಷ್ಟೇ ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿತ್ತು.



