March 6, 2026
Friday, March 6, 2026
spot_img

ಪಂಜಾಬಿ ಯೂಟ್ಯೂಬರ್​ ನ್ಯಾನ್ಸಿ ಗ್ರೆವಾಲ್ ಕೆನಡಾದಲ್ಲಿ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಮಾಧ್ಯಮಗಳಲ್ಲಿ ಭಾರತದ ಪರವಾಗಿ ತೀಕ್ಷ್ಣ ಹೇಳಿಕೆಗಳು ಹಾಗೂ ಗಂಭೀರವಾದ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಯೂಟ್ಯೂಬರ್​ ನ್ಯಾನ್ಸಿ ಗ್ರೆವಾಲ್​ ಅವರನ್ನು ಕೆನಡಾದಲ್ಲಿ ಹತ್ಯೆ ಮಾಡಲಾಗಿದೆ.

ಮಂಗಳವಾರ ರಾತ್ರಿ ನ್ಯಾನ್ಸಿ ಅವರ ಮೇಲೆ ಹಲ್ಲೆ ನಡೆಸಲಾಗಿದ್ದು, ತೀವ್ರ ಗಾಯಗೊಂಡ ಅವರನ್ನು ಅಲ್ಲಿನ ಎಸೆಕ್ಸ್​​ ವಿಂಡ್ಸರ್​ ತುರ್ತು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಯ ವೇಳೆ ಅವರು ನಿಧನರಾಗಿದ್ದಾರೆ ಎಂದು ಕೆನಡಾದ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾನ್ಸಿ ಗ್ರೆವಾಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ತೀಕ್ಷ್ಣ ಹೇಳಿಕೆ, ಪೋಸ್ಟ್​ಗಳಿಂದ ಹೆಸರುವಾಸಿಯಾಗಿದ್ದರು.

ಕೆನಡಾದ ಸ್ಥಳೀಯ ಮಾಧ್ಯಮಗಳಲ್ಲಿ ವರದಿ ಅಗಿರುವಂತೆ ಯೂಟ್ಯೂಬರ್ ಆಗಿದ್ದ ನ್ಯಾನ್ಸಿ ಗ್ರೆವಾಲ್ ಅವರ ಮೇಲೆ ಮಂಗಳವಾರ ರಾತ್ರಿ ಮಾರಣಾಂತಿಕ ಹಲ್ಲೆ ನಡೆದಿದೆ. ಈವರೆಗೂ ಯಾವುದೇ ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆಯೇ? ಇಲ್ಲವೇ ಎಂಬುದನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ.

ನ್ಯಾನ್ಸಿ ಗ್ರೆವಾಲ್ 6 ದಿನಗಳ ಹಿಂದೆ (ಫೆಬ್ರವರಿ 28) ತಮ್ಮ ಫೇಸ್​ ಬುಕ್​​ನಲ್ಲಿ ವಿವಾದಾತ್ಮಕ ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದರು. ಅದರಲ್ಲಿ ಅವರು ಶ್ರೀಅಕಲ್ ತಖ್ತ್ ಜಥೇದಾರ್ ಕುಲದೀಪ್ ಸಿಂಗ್ ಗರ್ಗಜ್ ಬಗ್ಗೆ ಅಸಭ್ಯ ಭಾಷೆಯನ್ನು ಬಳಸಿದ್ದಾರೆ ಎಂದು ಹೇಳಲಾಗಿದೆ. ಇದರ ನಂತರ, ಯಾವುದೇ ವಿಡಿಯೋವನ್ನು ಅವರು ಅಪ್‌ಲೋಡ್ ಮಾಡಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !