March 5, 2026
Thursday, March 5, 2026
spot_img

ಕಲಬುರಗಿಯಲ್ಲಿ ಟೆನಿಸ್ ರಂಗು: ಐಟಿಎಫ್ ಡಬ್ಲ್ಯೂ 35 ಸೆಮಿಫೈನಲ್ ಸಮರಕ್ಕೆ ವೇದಿಕೆ ಸಿದ್ಧ!

ಹೊಸದಿಗಂತ ಕಲಬುರಗಿ:

ಬಿಸಿಲ ನಗರಿ ಕಲಬುರಗಿಯ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಐಟಿಎಫ್ ಡಬ್ಲ್ಯೂ 35 ಮಹಿಳಾ ಓಪನ್ ಟೆನಿಸ್ ಟೂರ್ನಿ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಪ್ರೇಕ್ಷಕರ ಮನಸೂರೆಗೊಂಡಿರುವ ಈ ಟೂರ್ನಿಯಲ್ಲಿ ನಾಳೆ (ಶುಕ್ರವಾರ) ಡಬಲ್ಸ್ ವಿಭಾಗದ ರೋಚಕ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.

ಭಾರತದ ಸೋನಲ್ ಪಾಟೀಲ್ ಮತ್ತು ಬೆಲಾ ತಾಮ್ಹಂಕರ್ ಜೋಡಿಯು, ಬಲಿಷ್ಠ ಸವಾಲುಗಾರರಾದ ವೈಷ್ಣವಿ ಅಡ್ಕರ್ ಮತ್ತು ಅನುಭವಿ ಆಟಗಾರ್ತಿ ಅಂಕಿತಾ ರೈನಾ ಜೋಡಿಯ ವಿರುದ್ಧ ಸೆಣಸಲಿದ್ದಾರೆ. ಫೈನಲ್ ಪ್ರವೇಶಕ್ಕಾಗಿ ಈ ನಾಲ್ವರು ಭಾರತೀಯ ಆಟಗಾರ್ತಿಯರ ನಡುವೆ ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ.

ಮಧ್ಯಾಹ್ನದ ವಿಶ್ರಾಂತಿಯ ನಂತರ ನಡೆಯಲಿರುವ ಮತ್ತೊಂದು ಸೆಮಿಫೈನಲ್‌ನಲ್ಲಿ ಅಕಾಂಕ್ಷಾ ದಿಲೀಪ್ ನಿಟ್ಟೂರೆ ಮತ್ತು ಸೊಹಾ ಸಾದಿಕ್ ಜೋಡಿಯು, ಶ್ರಾವ್ಯ ಶಿವಾನಿ ಚಿಲಕಲಪೂಡಿ ಹಾಗೂ ಜಪಾನ್‌ನ ಮಿಚಿಕಾ ಒಜೆಕಿ ಜೋಡಿಯನ್ನು ಎದುರಿಸಲಿದೆ.

ಕಲಬುರಗಿಯ ಸಹಜ ಬಿಸಿಲಿಗಿಂತಲೂ ಅಂಗಳದಲ್ಲಿನ ಟೆನಿಸ್ ಆಟದ ಕಾವು ಸದ್ಯ ಕ್ರೀಡಾಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಸ್ಥಳೀಯ ಕ್ರೀಡಾಸಕ್ತರು ನೆಚ್ಚಿನ ಆಟಗಾರ್ತಿಯರನ್ನು ಬೆಂಬಲಿಸಲು ಕ್ರೀಡಾಂಗಣದತ್ತ ಧಾವಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !