ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಐದಾರು ವರ್ಷಗಳಲ್ಲಿ ರಾಜ್ಯದ ತೆರಿಗೆ ಆದಾಯವು ಒಂದು ರೋಲರ್ ಕೋಸ್ಟರ್ ರೈಡ್‌ನಂತೆ ಏರಿಳಿತಗಳನ್ನು ಕಂಡಿದೆ. 2020-21ರ ಅವಧಿಯಲ್ಲಿ ಆರ್ಥಿಕ ಹಿನ್ನಡೆಯಿಂದಾಗಿ ಕುಸಿತ ಕಂಡಿದ್ದ ತೆರಿಗೆ ಸಂಗ್ರಹ, 2021-22ರಿಂದ ಚೇತರಿಕೆಯ ಹಾದಿ ಹಿಡಿಯಿತು. ವಿಶೇಷವಾಗಿ 2022-23ರ ಸಾಲಿನಲ್ಲಿ ಆದಾಯದಲ್ಲಿ ಭಾರಿ ಜಿಗಿತ ಕಂಡುಬಂದಿದ್ದು ಆರ್ಥಿಕತೆಗೆ ಬಲ ತುಂಬಿತ್ತು.
ಆದರೆ, 2023-24ರಲ್ಲಿ ಈ ಬೆಳವಣಿಗೆಯ ವೇಗ ತುಸು ಮಂದಗತಿಯಲ್ಲಿ ಸಾಗಿ, ಸ್ಥಗಿತಗೊಂಡಂತೆ ಭಾಸವಾಗಿತ್ತು. ಇದೀಗ 2024-25 ಮತ್ತು ಪ್ರಸಕ್ತ 2025-26ರ ಸಾಲಿನಲ್ಲಿ ತೆರಿಗೆ ಸಂಗ್ರಹ ಮತ್ತೆ ವೇಗ ಪಡೆದುಕೊಂಡಿದ್ದು, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ತೆರಿಗೆ ಆದಾಯ 2 ಲಕ್ಷ ಕೋಟಿ ದಾಟುವ ಗುರಿ ತಲುಪುವ ನಿರೀಕ್ಷೆಯಿದೆ.



