May 18, 2026
Monday, May 18, 2026
spot_img

ಕತಾರ್‌ನಲ್ಲಿರುವ ಭಾರತೀಯರೇ ಸುರಕ್ಷಿತ ಸ್ಥಳದಲ್ಲೇ ಇರಿ: ರಾಯಭಾರಿ ಕಚೇರಿಯಿಂದ ಬಂತು ತುರ್ತು ಸೂಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡವಿದ್ದು, ಈ ಹಿನ್ನೆಲೆ ಕತಾರ್‌ನಲ್ಲಿರುವ ಭಾರತೀಯ ನಾಗರಿಕರಿಗೆ ದೋಹಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮಹತ್ವದ ಸಲಹೆ ಪ್ರಕಟಿಸಿದೆ.

ಕತಾರ್‌ನಲ್ಲಿರುವ ಎಲ್ಲಾ ನಿವಾಸಿಗಳು ಸುರಕ್ಷಿತ ಸ್ಥಳಗಳಲ್ಲಿ ಇರಬೇಕು, ಅತೀ ಅಗತ್ಯವಿದ್ದಾಗ ಮಾತ್ರ ಹೊರಗೆ ಹೋಗಬೇಕು, ಕಿಟಕಿಗಳು ಮತ್ತು ಬಾಲ್ಕನಿಗಳು ಹಾಗೂ ತೆರೆದ ಪ್ರದೇಶಗಳಿಂದ ದೂರ ಇರಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ಅದೇ ರೀತಿ ಕತಾರ್ ಅಧಿಕಾರಿಗಳು ನೀಡುವ ಎಲ್ಲಾ ಸೂಚನೆಗಳನ್ನು ಪಾಲಿಸುವಂತೆ ರಾಯಭಾರಿ ಕಚೇರಿ ತಿಳಿಸಿದೆ.

ಕತಾರ್‌ನ ವಾಯುಪ್ರದೇಶ ಇನ್ನೂ ಬಂದ್ ಆಗಿರುದ್ದು, ವಿಮಾನ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಕತಾರ್ ಏರ್‌ವೇಸ್ ಮಾರ್ಚ್ 7ರಂದು ಬೆಳಗ್ಗೆ 9 ಗಂಟೆಗೆ ಮುಂದಿನ ಮಾಹಿತಿ ನೀಡುವುದಾಗಿ ತಿಳಿಸಿದೆ.

ಭಾರತೀಯ ಸಮುದಾಯದ ಸುರಕ್ಷತೆಗಾಗಿ ರಾಯಭಾರಿ ಕಚೇರಿ 24 ಗಂಟೆಯ ಸಹಾಯವಾಣಿ ವ್ಯವಸ್ಥೆಯನ್ನು ಕೂಡ ಆರಂಭಿಸಿದೆ. ತುರ್ತು ಸಹಾಯಕ್ಕಾಗಿ +974 55647502 ಮತ್ತು +974 55362508 ಸಂಖ್ಯೆಗಳ ಸಂಪರ್ಕಿಸಬಹುದು. ಜೊತೆಗೆ cons.doha@mea.gov.in ಈ-ಮೇಲ್ ಮಾಡಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !