ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ನಾಯಿಯ ಮೂತ್ರ ವಿಸರ್ಜನೆ ವಿಷಯಕ್ಕೆ ದೊಡ್ಡ ಜಗಳವಾಗಿದೆ.
ಬ್ರಿಗೇಡ್ ಯುಟೋಪಿಯಾ ಅಪಾರ್ಟ್‌ಮೆಂಟ್‌ನ ವಾಕಿಂಗ್ ಪಾತ್‌ನಲ್ಲಿ ಹಿರಿಯರು ಹಾಗೂ ಕಿರಿಯರ ನಡುವೆ ನಾಯಿಯ ಸುಸು ವಿಚಾರಕ್ಕೆ ಕಿತ್ತಾಟ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ವರ್ತೂರಿನಲ್ಲಿರುವ ಈ ಅಪಾರ್ಟ್‌ಮೆಂಟ್‌ನಲ್ಲಿ ಹಿರಿಯರಿಗೆ ಮೀಸಲಾದ ಪಾತ್ ಇದೆ, ತರುಣ್ ಅರೋರ ಎನ್ನುವ ಯುವಕ ಹಿರಿಯರು ಕೂರುವ ಪಾತ್‌ನಲ್ಲಿ ನಾಯಿಯನ್ನು ವಾಕ್ ಮಾಡಿಸಿದ್ದಾರೆ. ಈ ಮಧ್ಯೆ ನಾಯಿ ಮೂತ್ರ ವಿಸರ್ಜನೆ ಮಾಡಿದೆ.
ಈ ವೇಳೆ ಹಿರಿಯರು ನಾವು ಕೂರುವ ಓಡಾಡುವ ಜಾಗದಲ್ಲಿ ನಾಯಿಯನ್ನು ಯಾಕೆ ಕರೆದುಕೊಂಡು ಬಂದಿರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತಿಗೆ ಮಾತು ಆಗಿ ತಳ್ಳಾಟ, ನೂರಾಟ, ಹೊಡೆದಾಟ ನಡೆದಿದೆ.
ಈ ಬಗ್ಗೆ ತರುಣ್ ಅರೋರ ವರ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಮ್ಮ ಮೇಲೆ ಹಿರಿಯರು ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಹಿರಿಯರೂ ಪ್ರತಿದೂರು ದಾಖಲಿಸಿದ್ದು ಅವರೇ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಜೀವಕ್ಕೆ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.
ವಿಡಿಯೋದಲ್ಲಿ ತರುಣ್ ಅರೋರ ಹಾಗೂ ಮಹಿಳೆ ನೆಲಕ್ಕೆ ಬಿದ್ದಿದು ಕಾಣಿಸುತ್ತಿದೆ. ಅಪಾರ್ಟ್‌ಮೆಂಟ್‌ನಲ್ಲಿ ಆ ಪ್ರದೇಶವನ್ನು ಹಿರಿಯ ನಾಗರಿಕರಿಗೆ ಮಾತ್ರ ಮೀಸಲು ಮಾಡಲಾಗಿದೆ ಎಂಬ ನಿಯಮ ಇರುವ ಹಿನ್ನೆಲೆಯಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.



