ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಯುದ್ಧದ ಪರಿಣಾಮ ಜಾಗತಿಕ ಮಟ್ಟದಲ್ಲಿ ಕಾಗದ ಹಾಗೂ ಮುದ್ರಣ ವೆಚ್ಚ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕಗಳ ಬೆಲೆ ಕೂಡ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
2026–27ನೇ ಶೈಕ್ಷಣಿಕ ವರ್ಷದ ಕರ್ನಾಟಕ ಪಠ್ಯಪುಸ್ತಕ ಸಂಘ ಹಲವು ಪುಸ್ತಕಗಳ ಬೆಲೆಯನ್ನು ಸುಮಾರು 45 ರಿಂದ 50 ಶೇಕಡಾವರೆಗೆ ಹೆಚ್ಚಿಸಿದೆ ಎನ್ನಲಾಗಿದೆ.
ಇದನ್ನೂ ಓದಿ:
3ನೇ ತರಗತಿಯ ಪರಿಸರ ಅಧ್ಯಯನ ಪುಸ್ತಕದ ಬೆಲೆ 22ರಿಂದ 45ಕ್ಕೆ ಏರಿಕೆಯಾಗಿದೆ. 2ನೇ ತರಗತಿಯ ಗಣಿತ (ಇಂಗ್ಲಿಷ್ ಭಾಗ–2) ಪುಸ್ತಕ 25ರಿಂದ 51ಕ್ಕೆ ಹೆಚ್ಚಾಗಿದೆ. ಜೊತೆಗೆ ಸಂಗೀತ ವಿಷಯಗಳ ಪುಸ್ತಕಗಳ ಬೆಲೆಯೂ ಏರಿಕೆ ಕಂಡಿದೆ.
ಯುದ್ಧದ ಪರಿಣಾಮವಾಗಿ ಕಾಗದದ ಆಮದು ಹಾಗೂ ಸಾಗಣೆ ವೆಚ್ಚ ಹೆಚ್ಚಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬೆಲೆ ಏರಿಕೆಗೆ ಖಾಸಗಿ ಶಾಲೆಗಳ ಒಕ್ಕೂಟ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.



