October 16, 2026
Friday, October 16, 2026
spot_img

ಸ್ಟಿಂಗ್ ಆಪರೇಷನ್ ವಿವಾದ: ಇಡಿ, ಐಟಿ ತನಿಖೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಒತ್ತಾಯ

ಹೊಸದಿಗಂತ ವರದಿ ರಾಮನಗರ:

ಮಾಜಿ ಮುಖ್ಯಮಂತ್ರಿ ವಿರುದ್ಧ ಸ್ಟಿಂಗ್ ಮಾಡುವುದಕ್ಕೆ ಅಪಾರ ಪ್ರಮಾಣದ ಹಣ ಕೈ ಬದಲಾಗಿದ್ದು, ಜಾರಿ ನಿರ್ದೇಶನಾಲಯ ಮತ್ತು ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಬಿಡದಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಸ್ಟಿಂಗ್ ಅಪರೇಷನ್ ದೊಡ್ಡದಾಗಿ ಸದ್ದು ಮಾಡುತ್ತಿದೆ. ಸ್ಟಿಂಗ್ ಮಾಡಲು 10ರಿಂದ 15 ಕೋಟಿ ಖರ್ಚು ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಅದರ ಬಗ್ಗೆ ತನಿಖೆ ಅಗತ್ಯವಿದೆ ಎಂದರು.

ಇದನ್ನೂ ಓದಿ:

ನೀವು ಕೇವಲ ಹಣದ ಬಗ್ಗೆ ಯಾಕೆ ಲೆಕ್ಕ ಹಾಕುತ್ತಿರಾ? ಅದೆಲ್ಲ ಹೊರಗೆ ಬಂದರೆ ನಮ್ಮ ರಾಜ್ಯದ ಮಾನ ಮಾರ್ಯಾದೆ ಮೂರು ಕಾಸಿಗೂ ಇರಲ್ಲ. ಇವತ್ತು ಆ ರೀತಿಯ ವಾತವರಣ ನಿರ್ಮಾಣ ಆಗಿದೆ. 15 ಕೋಟಿಗಿಂತಲೂ ಹೆಚ್ಚಿನ ವ್ಯವಹಾರ ನಡೆದಿದೆ. ʼಇಡಿʼ ಏನಾದರೂ ಪ್ರವೇಶವಾದರೆ ಸತ್ಯ ಹೊರಗೆ ಬರುತ್ತದೆ. ಹಣಕಾಸು ಹೇಗೆಲ್ಲ ಹರಿದಾಡಿದೆ ಎಂಬ ಮಾಹಿತಿ ಸಿಗುತ್ತದೆ ಎಂದು ಅವರು ತಿಳಿಸಿದರು.

Must Read